ಏಷ್ಯನ್ ಗೇಮ್ಸ್: ಚಿನ್ನ ಗೆದ್ದ 16ರ ಪೋರನನ್ನು ವೀರೂ ಕೊಂಡಾಡಿದ್ದು ಹೀಗೆ..

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 21, Aug 2018, 12:09 PM IST
Asian Games 2018 Teenage Shooter Saurabh Bags Gold Here Twitter Reaction
Highlights

10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಉತ್ತರಪ್ರದೇಶದ 16 ವರ್ಷದ ಸೌರಭ್ ಚೌಧರಿ ಚಿನ್ನಕ್ಕೆ ಮುತ್ತಿಕ್ಕಿದ್ದಾರೆ. ಇದೇ ವಿಭಾಗದಲ್ಲಿ ಅಭಿಷೇಕ್ ವರ್ಮಾ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದ 16ರ ಪೋರ 2017ರ ಡಿಸೆಂಬರ್’ನಲ್ಲಿ 10ನೇ ಯುವ ಏಷ್ಯನ್ ಗೇಮ್ಸ್’ನಲ್ಲಿ ಚಿನ್ನ ಗೆದ್ದು ಗ

ನವದೆಹಲಿ[ಆ.21]: ಜಕಾರ್ತದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್’ನಲ್ಲಿ ಮೂರನೇ ದಿನದ ಆರಂಭದಲ್ಲೇ ಭಾರತ ಮತ್ತೆರಡು ಪದಕ ಗೆದ್ದುಕೊಂಡಿದೆ. ಈ ಮೂಲಕ ಭಾರತ 3 ಚಿನ್ನ 2 ಬೆಳ್ಳಿ ಹಾಗೂ ಎರಡು ಕಂಚು ಸೇರಿ ಒಟ್ಟು 7 ಪದಕ ಸಂಪಾದಿಸಿದೆ.

10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಉತ್ತರಪ್ರದೇಶದ 16 ವರ್ಷದ ಸೌರಭ್ ಚೌಧರಿ ಚಿನ್ನಕ್ಕೆ ಮುತ್ತಿಕ್ಕಿದ್ದಾರೆ. ಇದೇ ವಿಭಾಗದಲ್ಲಿ ಅಭಿಷೇಕ್ ವರ್ಮಾ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದ 16ರ ಪೋರ 2017ರ ಡಿಸೆಂಬರ್’ನಲ್ಲಿ 10ನೇ ಯುವ ಏಷ್ಯನ್ ಗೇಮ್ಸ್’ನಲ್ಲಿ ಚಿನ್ನ ಗೆದ್ದು ಗಮನ ಸೆಳೆದಿದ್ದರು.

ಸೌರಭ ಸಾಧನೆಗೆ ಈಗಾಗಲೇ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ 16 ವರ್ಷದ ಯುವ ಶೂಟರ್ ಅವರನ್ನು ಟ್ವೀಟ್ ಮೂಲಕ ಕೊಂಡಾಡಿದ್ದಾರೆ. 16 ವರ್ಷದವರಾಗಿದ್ದಾಗ ನೀವೇನು ಮಾಡುತ್ತಿದ್ದಿರಿ..? ವಿಶ್ವದ ದಿಗ್ಗಜ ಶೂಟರ್’ಗಳನ್ನು ಮಣಿಸಿ ಚಿನ್ನ ಗೆದ್ದ 16 ವರ್ಷದ ಸೌರಭ್ ಚೌಧರಿ ಅವರಿಗೆ ಅಭಿನಂದನೆಗಳು ಎಂದಿದ್ದಾರೆ.

ಇನ್ನು ಇದೇವೇಳೆ, 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲೇ ಕಂಚು ಗೆದ್ದ ಅಬಿಷೇಕ್ ವರ್ಮಾ ಅವರ ಸಾಧನೆಯನ್ನು ಶ್ಲಾಘಿಸಲು ಮರೆತಿಲ್ಲ.

ಪ್ರಧಾನಿ ನರೇಂದ್ರ ಮೋದಿ, ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಕೂಡಾ ಶೂಟರ್’ಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ...

loader