ಟೀಕಿಸಿದವರಿಗೆ ಪದಕದ ಉತ್ತರ - ಸ್ಪಪ್ನ ಬರ್ಮನ್ ಚಿನ್ನದ ಹಿಂದಿನ ಕಹಾನಿ

ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಪಶ್ಚಿಮ ಬಂಗಾಳ ಪ್ರತಿಭೆ ಸಪ್ನ ಬರ್ಮನ್ ಈ ಸಾಧನೆ ಮಾಡಲು ಹಲವು ಅಡೆ ತಡೆ ಎದುರಿಸಿದ್ದಾರೆ. ಸಪ್ನ ಕಡು ಬಡತನ ಬೆಳೆದ ಕ್ರೀಡಾಪಟು. ಹೀಗಾಗಿ ಆರ್ಥಿಕ ನೆರವು ಇಲ್ಲದೆ ಬರಿಗಾಲಲ್ಲೇ ಓಡಿ ಅಭ್ಯಾಸ ಮಾಡಿದ ಪ್ರತಿಭೆ. ಇದರ ಜೊತೆಗೆ ಹಲವರ ಟೀಕೆಗಳು, ಆರೋಪಗಳು ಕೂಡ ಸಪ್ನ ಮನಸ್ಸಿಗೆ ತೀವ್ರ ನೋವು ತಂದಿತ್ತು. ಇಲ್ಲಿದೆ ಸ್ಪಪ್ನ ಚಿನ್ನದ ಪಯಣದ ರೋಚಕ ಕತೆ.

Asian games 2018 Swapna Barman golden journey

ಜಲ್ಪೈಗುರಿ(ಸೆ.05): ಒಂದೆಡೆ ಸತತ ಟೀಕೆ, ಸಾಮರ್ಥ್ಯ- ಪ್ರತಿಭೆ ಕುರಿತು ಪ್ರಶ್ನೆಗಳ ಮೇಲೆ ಪ್ರಶ್ನೆ, ಮತ್ತೊಂದೆಡೆ ಇಂಜುರಿ ಸಮಸ್ಯೆ. ಈ ಎಲ್ಲಾ ಅಡೆತಡೆಗಳ ನಡುವೆ ಪಶ್ಚಿಮ ಬಂಗಾಳದ ಸ್ಪಪ್ನ ಬರ್ಮನ್ ಏಷ್ಯನ್ ಗೇಮ್ಸ್ ಹೆಪ್ಟಥ್ಲಾನ್‌ನಲ್ಲಿ ಚಿನ್ನದ ಪದಕ ಸಾಧನೆ ಮಾಡಿದ್ದಾರೆ.

ಏಷ್ಯನ್ ಗೇಮ್ಸ್ ಕ್ರೀಡಾಕೂಟಕ್ಕೂ ಮುನ್ನ ಸ್ಪಪ್ನ ಬರ್ಮನ್ ಆಯ್ಕೆ ಕುರಿತು ಟೀಕೆಗಳು ವ್ಯಕ್ತವಾಗಿತು. ಟೀಕೆಗಳಿಗೆ ತಕ್ಕ ಉತ್ತರ ನೀಡಬೇಕು ಎಂದುಕೊಂಡ ಸ್ಪಪ್ನಗೆ ಗಾಯದ ಸಮಸ್ಯೆಯೂ ಕಾಡಿತ್ತು. ಇದರ ನಡುವೆ ಸಪ್ನ ಚಿನ್ನದ ಪದಕ ಸಾಧನೆ ಮಾಡಿದ್ದಾರೆ.

ಏಷ್ಯನ್ ಗೇಮ್ಸ್ ಕ್ರೀಡಾಕೂಟಕ್ಕೆ ತೆರಳಿದ ಬರ್ಮನ್ ಬೆನ್ನು ನೋವು, ಮೊಣಕಾಲಿನ ಗಾಯ ಹಾಗೂ ಪಾದದ ಗಾಯಕ್ಕೆ ತುತ್ತಾಗಿದ್ದರು. ಇದರ ಜೊತೆಗೆ ಹಲ್ಲಿನ ನೋವು ಕೂಡ ಕಾಣಿಸಿಕೊಂಡಿತ್ತು. ಗಾಯದ ಸಮಸ್ಯೆಯಿಂದಲೇ ಸಪ್ನ ಆಯ್ಕೆಯನ್ನ ಹಲವರು ಪ್ರಶ್ನಿಸಿದ್ದರು. ಇನ್ನು ಕೆಲವರು ಇಂಜುರಿಯಾಗಿರೋ ಸಪ್ನ ಆಯ್ಕೆಯಿಂದ ಹಣ ವ್ಯರ್ಥವಾಯಿತು ಎಂದು ಆರೋಪಿಸಿದ್ದರು.

ಕೋಚ್ ಹಾಗೂ ಪೋಷಕರ ಪ್ರೋತ್ಸಾಹದಿಂದ ನಾನು ಆತ್ಮವಿಶ್ವಾಸ ಕಳೆದುಕೊಂಡಿರಲಿಲ್ಲ. ಹೀಗಾಗಿ ಜಕರ್ತಾ ಪ್ರಯಾಣ ಬೆಳೆಸಲು ನಿರ್ಧರಿಸಿದೆ. ಫೈನಲ್ ಸುತ್ತಿಗೆ ಇನ್ನೆರಡು ದಿನ ಬಾಕಿ ಇರುವಾಗಲೇ ಸಪ್ನ ಬರ್ಮನ್ ಹಲ್ಲಿನ ನೋವು ಅತಿಯಾಗಿತ್ತು. ಆದರೆ ನಾನು ಪದಕ ಗೆದ್ದೇ ಬರುತ್ತೇನೆ ಎಂದು ತಾಯಿಗೆ ಭರವಸೆ ನೀಡಿದ್ದೆ ಎಂದು ಸ್ವಪ್ನ ಬರ್ಮನ್ ತಮ್ಮ ಏಷ್ಯನ್ ಗೇಮ್ಸ್ ಪಯಣದ ರೋಚಕ ಕತೆ ಹೇಳಿದ್ದಾರೆ.

ಫೈನಲ್ ಸುತ್ತಿನ ದಿನ ಕಾಲಿನ ಗಾಯ ಕಡಿಮೆಯಾಗಿತ್ತು. ಆದರೆ ಹಲ್ಲಿನ ನೋವು ಮಾತ್ರ ಹಾಗೇ ಇತ್ತು. ಈ ನೋವಿಗಾಗಿ ಟೇಪ್ ಅಂಟಿಸಿ, ಆಂಟಿಬಯೋಟಿಕ್ ಜೊತೆಗೆ ಟ್ರ್ಯಾಕ್‌ಗೆ ಇಳಿದಿದ್ದೆ. ನನ್ನ ಎಲ್ಲಾ ಶಕ್ತಿ ಬಳಸಿ ಅತ್ಯುತ್ತಮ ಪ್ರದರ್ಶನ ನೀಡಿದೆ. ಇದರಿಂದ ಚಿನ್ನದ ಪದಕ ಗೆಲ್ಲಲು ಸಾಧ್ಯವಾಯಿತು ಎಂದು ಸಪ್ನ ಬರ್ಮನ್ ಹೇಳಿದ್ದಾರೆ. 

Latest Videos
Follow Us:
Download App:
  • android
  • ios