ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಐತಿಹಾಸಿಕ ಸಾಧನೆ ಮಾಡಿದೆ.  ಈಕ್ವೆಸ್ಟ್ರಿಯನ್ ಕ್ರೀಡೆಯಲ್ಲಿ ಭಾರತ ಪದಕ ಗೆಲ್ಲೋ ಮೂಲಕ ಭಾರತದ ಪದಕದ ಸಂಖ್ಯೆ 31ಕ್ಕೇರಿದೆ. 

ಜಕರ್ತಾ(ಆ.26): ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಭರವಸೆಯ ಕ್ರೀಡಾಪಟುಗಳು ಹಾಗೂ ಕ್ರೀಡೆಯಲ್ಲಿ ಪದಕ ಭೇಟೆಯಾಡಲು ವಿಫಲಾವಾಗಿದೆ. ಆದರೆ ಯುವ ಪ್ರತಿಭಾವಂತ ಕ್ರೀಡಾಪಟುಗಳು ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕೆ ಈಕ್ವೆಸ್ಟ್ರಿಯನ್ ಕ್ರೀಡೆ ಕೂಡ ಸೇರಿದೆ.

ವೈಯುಕ್ತಿಕ ಈಕ್ವೆಸ್ಟ್ರಿಯನ್ ಕುದರೆ ಜಂಪ್ ಕ್ರೀಡೆಯಲ್ಲಿ ಭಾರತದ ಫೌದ್ ಮಿರ್ಜಾ 26.40 ಅಂಕಗಳೊಂದಿಗೆ ಬೆಳ್ಳಿ ಪದಕ ಗೆದ್ದಿದ್ದಾರೆ. ಜಪಾನ್‌ನ್ ಒಯಿವಾ ಯೊಶಿಯಾಕಿ ಚಿನ್ನದ ಪದಕ ಗೆದ್ದರು.

1982ರ ಬಳಿಕ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಈಕ್ವೆಸ್ಟ್ರಿಯನ್ ಕ್ರೀಡೆಯ ವೈಯುಕ್ತಿಕ ವಿಭಾಗದಲ್ಲಿ ಭಾರತ ಇದೇ ಮೊದಲ ಬಾರಿಗೆ ಪದಕ ಗೆದ್ದಿದೆ. ಇನ್ನು ಈಕ್ವೆಸ್ಟ್ರಿಯನ್ ತಂಡ ವಿಭಾಗದಲ್ಲೂ ಭಾರತ ಬೆಳ್ಳಿ ಪದಕ ಗೆದ್ದಿದೆ.

ಫೌದ್ ಮಿರ್ಜ್, ರಾಕೇಶ್ ಕುಮಾರ್, ಆಶಿಶ್ ಮಲಿಕ್, ಜೀತೆಂದ್ರ ಸಿಂಗ್ ತಂಡ ಬೆಳ್ಳಿ ಪದಕ ಗೆದ್ದ ಸಾಧನೆ ಮಾಡಿದೆ. ಈ ಮೂಲಕ ಭಾರತ 7 ಚಿನ್ನ, 7 ಬೆಳ್ಳಿ ಹಾಗೂ 17 ಕಂಚು ಸೇರಿದಂತೆ ಒಟ್ಟು 31 ಪದಕ ಗೆದ್ದು 9ನೇ ಸ್ಥಾನದಲ್ಲಿದೆ.