ಅಘ್ಘಾನಿಸ್ತಾನ ವಿರುದ್ಧದ ಪಂದ್ಯ ಟೈನಲ್ಲಿ ಅಂತ್ಯಗೊಳ್ಳುತ್ತಿದ್ದಂತೆ ಭಾರತದ ಬಾಲಕ ಅಭಿಮಾನಿಯೊಬ್ಬ ಬಿಕ್ಕಿ ಬಿಕ್ಕಿ ಅತ್ತಿದ್ದ. ಇದೀಗ ಬಾಂಗ್ಲಾದೇಶ ವಿರುದ್ಧದ ಫೈನಲ್ ಪಂದ್ಯದಲ್ಲಿ ಈ ಬಾಲಕನನ್ನ ಮತ್ತೆ ನೋಯಿಸಬೇಡಿ ಎಂದು ಟ್ವಿಟರಿಗರು ಮನವಿ ಮಾಡಿದ್ದಾರೆ.
ದುಬೈ(ಸೆ.28): ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಉಭಯ ತಂಡಗಳು ಗೆಲುವಿಗಾಗಿ ಹೋರಾಟ ನಡೆಸುತ್ತಿದೆ. ಲಿಟ್ಟನ್ ದಾಸ್ ಭರ್ಜರಿ ಬ್ಯಾಟಿಂಗ್ ಭಾರತಕ್ಕೆ ಅಪಾಯದ ಸೂಚನೆ ನೀಡುತ್ತಿದೆ. ಹೀಗಾಗಿ ಭಾರತದ ಪುಟ್ಟ ಬಾಲಕನ ಚಿಂತೆ ಹೆಚ್ಚಾಗಿದೆ.
ಅಫ್ಘಾನಿಸ್ತಾನ ವಿರುದ್ಧದ ಪಂದ್ಯ ಟೈನಲ್ಲಿ ಅಂತ್ಯವಾಗಿತ್ತು. ಭಾರತದ ಗೆಲುವನ್ನ ನಿರೀಕ್ಷಿಸಿದ್ದ ಪುಟ್ಟ ಬಾಲಕ ಬಿಕ್ಕಿ ಬಿಕ್ಕಿ ಅತ್ತಿದ್ದ. ಇದೀಗ ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೂ ಈ ಬಾಲಕ ಹಾಜರಾಗಿದ್ದಾನೆ. ಆದರೆ ಬಾಂಗ್ಲಾ ಬ್ಯಾಟ್ಸ್‌ಮನ್‌ಗಳ ಪ್ರದರ್ಶನದಿಂದ ಬಾಲಕನ ಆತಂಕ ಹೆಚ್ಚಾಗಿದೆ.
ಬಾಲಕನ ಆತಂಕ ನೋಡಿದ ಟ್ವಿಟರಿಗರು, ಟೀಂ ಇಂಡಿಯಾಗೆ ಮನವಿ ಮಾಡಿದ್ದಾರೆ. ಬಾಲಕನನ್ನ ಮತ್ತೆ ನೋಯಿಸಬೇಡಿ. ಭಾರತ ಭರ್ಜರಿ ಗೆಲುವು ಸಾಧಿಸಲಿ ಎಂದು ಟ್ವಿಟರ್ ಮೂಲಕ ಮನವಿ ಮಾಡಿದ್ದಾರೆ.
