ದುಬೈ(ಸೆ.23): ಭಾರತ ವಿರುದ್ಧದ ಏಷ್ಯಾಕಪ್ ಸೂಪರ್ 4 ಹಂತದ ಪಂದ್ಯದಲ್ಲಿ ಪಾಕಿಸ್ತಾನ ಆಲ್ರೌಂಡರ್ ಶೋಯಿಬ್ ಮಲ್ಲಿಕ್ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ಪಾಕಿಸ್ತಾನ ಆರಂಭಿಕ ಆಘಾತದಿಂದ ಚೇತರಿಸಿಕೊಂಡಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನ ಆರಂಭದಲ್ಲೇ  ಇಮಾಮ್ ಉಲ್ ಹಕ್ ವಿಕೆಟ್ ಕಳೆದುಕೊಂಡಿತು. ಇಮಾಮ್ 10 ರನ್ ಸಿಡಿಸಿ ಔಟಾದರು.  ಆದರೆ 1 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 31 ರನ್ ಸಿಡಿಸಿದ್ದ ಫಕರ್ ಜಮಾನ್, ಕುಲ್ದೀಪ್ ಮೋಡಿಗೆ ಬಲಿಯಾದರು.  ಇನ್ನು 9ರನ್  ಸಿಡಿಸಿದ ಬಾಬರ್ ಅಜಮ್ ರನೌಟ್‌ಗೆ ಬಲಿಯಾದರು. 

3 ವಿಕೆಟ್ ಕಳೆದುಕೊಂಡ ಪಾಕಿಸ್ತಾನ ತಂಡಕ್ಕೆ ನಾಯಕ ಸರ್ಫಾರಾಜ್ ಅಹಮ್ಮದ್ ಹಾಗೂ ಶೋಯಿಬ್ ಮಲ್ಲಿಕ್ ಆಸರೆಯಾದರು. ಮಲ್ಲಿಕ್ ಅರ್ಧಶತಕ ಸಿಡಿಸಿದರೆ, ಸರ್ಫರಾಜ್ ಅಜೇಯ 35 ರನ್ ಸಿಡಿಸಿ ಹಾಫ್ ಸೆಂಚುರಿಯತ್ತ ದಾಪುಗಾಲಿಟ್ಟಿದ್ದಾರೆ.

ಸದ್ಯ ಪಾಕಿಸ್ತಾನ 3 ವಿಕೆಟ್ ನಷ್ಟಕ್ಕೆ 141 ರನ್ ಪೇರಿಸಿದೆ. ಮಲ್ಲಿಕ್ ಹಾಗೂ ಸರ್ಫರಾಜ್ ಜೋಡಿಯನ್ನ ಬೇರ್ಪಡಿಸಲು ಟೀಂ ಇಂಡಿಯಾ ಕಠಿಣ ಹೋರಾಟ ನಡೆಸುತ್ತಿದೆ.