Asianet Suvarna News Asianet Suvarna News

ಏಷ್ಯಾಕಪ್ 2018: ಅರ್ಧಶತಕ ಸಿಡಿಸಿದ ಬರ್ತ್ ಡೇ ಬಾಯ್ ರಶೀದ್ ಖಾನ್

ಬಾಂಗ್ಲಾದೇಶ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡೋ ಮೂಲಕ ಅಫ್ಘಾನಿಸ್ತಾನ ಸ್ಪಿನ್ನರ್ ರಶೀದ್ ಖಾನ್ ತಮ್ಮ ಹುಟ್ಟು ಹಬ್ಬವನ್ನ ಸ್ಮರಣೀಯವಾಗಿಸಿದ್ದಾರೆ. ಯುವ ಸ್ಪಿನ್ನರ್ ಆರ್ಭಟ ಹೇಗಿತ್ತು? ಇಲ್ಲಿದೆ ಹೈಲೈಟ್ಸ್.

Asia Cup cricket Birthday Boy Rashid Khan Hits half century against Bangladesh
Author
Bengaluru, First Published Sep 20, 2018, 10:22 PM IST
  • Facebook
  • Twitter
  • Whatsapp

ದುಬೈ(ಸೆ.20): ಏಷ್ಯಾಕಪ್ ಟೂರ್ನಿಯ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಆಫ್ಘಾನಿಸ್ತಾನ ಸ್ಪಿನ್ನರ್ ರಶೀದ್ ಖಾನ್ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ.  ತಮ್ಮ ಹುಟ್ಟುಹಬ್ಬದ ದಿನವೇ ಹಾಫ್ ಸೆಂಚುರಿ ಸಿಡಿಸಿದ ರಶೀದ್ ಬ್ಯಾಟಿಂಗ್ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಅಫ್ಘಾನಿಸ್ತಾನ ನಿಧಾನಗತಿಯ ಬ್ಯಾಟಿಂಗ್ ಮಾಡಿತು. ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ತಂಡಕ್ಕೆ ಅಂತಿಮ ಹಂತದಲ್ಲಿ ರಶೀದ್ ಖಾನ್ ಹಾಗೂ ಗುಲ್ಬಾಡಿನ್ ನೈಬ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೆರವಾಯಿತು.

20ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡ ರಶೀದ್ ಖಾನ್ 32 ಎಸೆತದಲ್ಲಿ 8 ಬೌಂಡರಿ ಹಾಗೂ 1 ಭರ್ಜರಿ ಸಿಕ್ಸರ್ ಸಿಡಿಸೋ ಮೂಲಕ ಅಜೇಯ 52 ರನ್ ಸಿಡಿಸಿದರು. ಇನ್ನು ನೈಬ್ ಅಜೇಯ 42 ರನ್ ಕಾಣಿಕೆ ನೀಡಿದರು. ರಶೀದ್ ಆರ್ಭಟದಿಂದ ಆಫ್ಘಾನಿಸ್ತಾನ 7 ವಿಕೆಟ್ ನಷ್ಟಕ್ಕೆ 255 ರನ್ ಸಿಡಿಸಿತು.
 

Follow Us:
Download App:
  • android
  • ios