ದುಬೈ[ಸೆ.27]: ಪಾಕಿಸ್ತಾನವನ್ನು ರೋಚಕವಾಗಿ ಮಣಿಸುವ ಮೂಲಕ ಮಶ್ರಫೆ ಮೊರ್ತಾಜಾ ನೇತೃತ್ವದ ಬಾಂಗ್ಲಾದೇಶ ಏಷ್ಯಾಕಪ್ ಟೂರ್ನಿಯಲ್ಲಿ ಫೈನಲ್’ಗೆ ಲಗ್ಗೆಯಿಟ್ಟಿದೆ. ಅಬುದಾಬಿಯಲ್ಲಿ ನಡೆದ ಸಾಂಪ್ರದಾಯಿಕ ಎದುರಾಳಿಗಳ ಪಂದ್ಯದಲ್ಲಿ ಪಾಕಿಸ್ತಾನವನ್ನು 37 ರನ್’ಗಳಿಂದ ಮಣಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದೆ. ಇದೀಗ ನಾಳೆ[ಸೆ.28] ನಡೆಯಲಿರುವ ಏಷ್ಯಾಕಪ್ ಫೈನಲ್’ನಲ್ಲಿ ಬಾಂಗ್ಲಾದೇಶವು ಟೀಂ ಇಂಡಿಯಾವನ್ನು ಎದುರಿಸಲಿದೆ. ಬಾಂಗ್ಲಾದೇಶದ ಪ್ರದರ್ಶನದ ಬಗ್ಗೆ ವಿರೇಂದ್ರ ಸೆಹ್ವಾಗ್, ಸ್ಕಾಟ್ ಸ್ಟೈರೀಸ್ ಸೇರಿದಂತೆ ಹಲವು ದಿಗ್ಗಜರು ಕೊಂಡಾಡಿದ್ದಾರೆ.

ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ಮುಷ್ಫಿಕರ್ ರಹೀಮ್[99] ಶತಕವಂಚಿತ ಬ್ಯಾಟಿಂಗ್ ನೆರವಿನಿಂದ 48.5 ಓವರ್’ಗಳಲ್ಲಿ 239 ರನ್ ಕಲೆಹಾಕಿತ್ತು. ಇದಕ್ಕುತ್ತರವಾಗಿ ಪಾಕಿಸ್ತಾನ ಇಮಾಮ್ ಉಲ್ ಹಕ್[83] ಏಕಾಂಗಿ ಹೋರಾಟದ ಹೊರತಾಗಿಯೂ ಕೇವಲ 202 ರನ್ ಗಳಿಸಲಷ್ಟೇ ಶಕ್ತವಾಯಿತು. ಬಾಂಗ್ಲಾದೇಶದ ಸಂಘಟಿತ ಪ್ರದರ್ಶನ ಏಷ್ಯಾಕಪ್ ಫೈನಲ್’ಗೇರುವಂತೆ ಮಾಡಿದೆ. ಪಾಕಿಸ್ತಾನ ಫೈನಲ್ ಪ್ರವೇಶಿಸುತ್ತೆ ಎಂದು ಕುತೂಹಲದಿಂದ ಎದುರು ನೋಡುತ್ತಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಸೆಹ್ವಾಗ್ ಸೇರಿದಂತೆ ದಿಗ್ಗಜರು ಟ್ವೀಟ್ ಮಾಡಿದ್ದು ಹೀಗೆ...