Asianet Suvarna News Asianet Suvarna News

ರೋಹಿತ್ ಇಂದು ಮತ್ತೊಂದು ದ್ವಿಶತಕ ಬಾರಿಸ್ತಾರಾ..?

ಇಂದು ಭಾರತ-ಪಾಕಿಸ್ತಾನ ತಂಡಗಳು ಏಷ್ಯಾಕಪ್’ನಲ್ಲಿ ಮತ್ತೊಮ್ಮೆ ಮುಖಾಮುಖಿಯಾಗುತ್ತಿವೆ. ಈ ಪಂದ್ಯ ರೋಹಿತ್ ಶರ್ಮಾ ಪಾಲಿಗೆ ಮತ್ತೊಂದು ಮಹತ್ವದ ಪಂದ್ಯವಾಗುವ ಸಾಧ್ಯತೆಯಿದೆ.

ದುಬೈ[ಸೆ.23]: ಇಂದು ಭಾರತ-ಪಾಕಿಸ್ತಾನ ತಂಡಗಳು ಏಷ್ಯಾಕಪ್’ನಲ್ಲಿ ಮತ್ತೊಮ್ಮೆ ಮುಖಾಮುಖಿಯಾಗುತ್ತಿವೆ. ಈ ಪಂದ್ಯ ರೋಹಿತ್ ಶರ್ಮಾ ಪಾಲಿಗೆ ಮತ್ತೊಂದು ಮಹತ್ವದ ಪಂದ್ಯವಾಗುವ ಸಾಧ್ಯತೆಯಿದೆ.

ಟೀಂ ಇಂಡಿಯಾದ ಹಂಗಾಮಿ ನಾಯಕ ರೋಹಿತ್ ಶರ್ಮಾ ಪಾಲಿಗೆ ಮೂರು ಅದೃಷ್ಟದ ಸಂಖ್ಯೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಅವರ ಈ ಹಿಂದಿನ ಮೂರು ದ್ವಿಶತಕಗಳ ಹಿಂದೆ ಅವರು ಅದೃಷ್ಟದ ಸಂಖ್ಯೆಯ ಪಾತ್ರವನ್ನು ಅಲ್ಲಗಳೆಯುವಂತಿಲ್ಲ. ಇದೀಗ ಹಿಟ್’ಮ್ಯಾನ್ ರೋಹಿತ್ ಅಭಿಮಾನಿಗಳು ಮುಂಬೈಕರ್ ಅವರಿಂದ ಮತ್ತೊಂದು ದ್ವಿಶತಕ ಸಿಡಿಸುವ ನಿರೀಕ್ಷೆಯಲ್ಲಿದ್ದಾರೆ. ಹೀಗೆ ಹೇಳಲು ಕಾರಣವೂ ಇದೆ... ಏನದು ಎಂಬ ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ...