ಕರಾಚಿ(ಸೆ.28): ಏಷ್ಯಾಕಪ್‌ ಫೈನಲ್‌ಗೆ ತಂಡವನ್ನು ಕೊಂಡೊಯ್ಯಲು ವಿಫಲರಾಗಿದ್ದಕ್ಕೆ, ಪಾಕಿಸ್ತಾನ ನಾಯಕ ಸರ್ಫರಾಜ್‌ ಅಹ್ಮದ್‌ ಟೀಕೆಗೆ ಗುರಿಯಾಗಿದ್ದಾರೆ. ಪಾಕಿಸ್ತಾನ ಅಭಿಮಾನಿಗಳು ಸಾಮಾಜಿಕ ತಾಣಗಳಲ್ಲಿ ಸರ್ಫರಾಜ್‌ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇಲ್ಲಿನ ಟ್ಯಾಕ್ಸಿ ಕಂಪನಿಯಾದ ‘ಕರೀಮ್‌ ಪಾಕಿಸ್ತಾನ್‌’ ಟ್ವೀಟರ್‌ನಲ್ಲಿ ಸರ್ಫರಾಜ್‌ ಕಾಲೆಳೆದಿದೆ. 

ಈ ಸಂಸ್ಥೆಯ ಟ್ಯಾಕ್ಸಿಗಳನ್ನು ಚಲಾಯಿಸುವ ಚಾಲಕರನ್ನು ‘ಕ್ಯಾಪ್ಟನ್‌’ ಎಂದು ಕರೆಯಲಾಗುತ್ತದೆ. ‘ಸರ್ಫರಾಜ್‌, ನೀವು ನಮ್ಮ ಸಂಸ್ಥೆಯಲ್ಲಿ ಕ್ಯಾಪ್ಟನ್‌ ಆಗಿ ಯಾಕೆ ಸೇರಿಕೊಳ್ಳಬಾರದು’ ಎಂದು ‘ಕರೀಮ್‌ ಪಾಕಿಸ್ತಾನ್‌’ ಟ್ಯಾಕ್ಸಿ ಸಂಸ್ಥೆ ಟ್ವೀಟ್‌ ಮಾಡಿದೆ. ಈ ಟ್ವೀಟ್‌ ವೈರಲ್‌ ಆಗಿದೆ.

ಸೂಪರ್ 4 ಹಂತದ ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಮುಗ್ಗರಿಸುವ ಮೂಲಕ ಏಷ್ಯಾಕಪ್ ಫೈನಲ್ ಪ್ರವೇಶಿಸುವ ಅವಕಾಶವನ್ನು ಕೈಚೆಲ್ಲಿತು.