ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 222 ರನ್’ಗಳಿಗೆ ಸರ್ವಪತನ ಕಂಡಿತು. ಗುರಿ ಬೆನ್ನತ್ತಿದ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯುವ ಮುನ್ಸೂಚನೆ ನೀಡಿತು. ತಂಡದ ಮೊತ್ತ 35 ರನ್’ಗಳಾಗಿದ್ದಾಗ ನಜ್ಮುಲ್ ಇಸ್ಲಾಮ್ ಬೌಲಿಂಗ್’ನಲ್ಲಿ ಸೌಮ್ಯ ಸರ್ಕಾರ್’ಗೆ ಶಿಖರ್ ಧವನ್ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಧವನ್ ವಿಕೆಟ್ ಪಡೆಯುತ್ತಿದ್ದಂತೆ ನಜ್ಮುಲ್ ನಾಗಿಣಿ ಡ್ಯಾನ್ ಮಾಡಿ ವ್ಯಂಗ್ಯದ ವಿದಾಯ ಕೋರಿದರು.
ಬೆಂಗಳೂರು[ಸೆ.29]: ಬಾಂಗ್ಲಾದೇಶವನ್ನು ಕೊನೆಯ ಎಸೆತದಲ್ಲಿ ಮಣಿಸಿದ ರೋಹಿತ್ ಶರ್ಮಾ 14ನೇ ಆವೃತ್ತಿಯ ಏಷ್ಯಾಕಪ್’ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಆರಂಭದಿಂದಲೂ ರೋಚಕತೆಯಿಂದ ಕೂಡಿದ್ದ ಪಂದ್ಯವನ್ನು ಜಯಿಸುವ ಮೂಲಕ ಟೀಂ ಇಂಡಿಯಾ, ತನ್ನ ಅಭಿಮಾನಿಗಳ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡುವಲ್ಲಿ ಯಶಸ್ವಿಯಾಯಿತು.
ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 222 ರನ್’ಗಳಿಗೆ ಸರ್ವಪತನ ಕಂಡಿತು. ಗುರಿ ಬೆನ್ನತ್ತಿದ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯುವ ಮುನ್ಸೂಚನೆ ನೀಡಿತು. ತಂಡದ ಮೊತ್ತ 35 ರನ್’ಗಳಾಗಿದ್ದಾಗ ನಜ್ಮುಲ್ ಇಸ್ಲಾಮ್ ಬೌಲಿಂಗ್’ನಲ್ಲಿ ಸೌಮ್ಯ ಸರ್ಕಾರ್’ಗೆ ಶಿಖರ್ ಧವನ್ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಧವನ್ ವಿಕೆಟ್ ಪಡೆಯುತ್ತಿದ್ದಂತೆ ನಜ್ಮುಲ್ ನಾಗಿಣಿ ಡ್ಯಾನ್ ಮಾಡಿ ವ್ಯಂಗ್ಯದ ವಿದಾಯ ಕೋರಿದರು.
ಇದೀಗ ನಜ್ಮುಲ್ ನಾಗಿಣಿ ಡ್ಯಾನ್ಸ್ ವ್ಯಾಪಕ ಟೀಕೆಗೆ ಗುರಿಯಾಗಿದ್ದು, ನಾಗಿಣಿ ಡ್ಯಾನ್ಸ್ ತಾತ್ಕಾಲಿಕ ಆದರೆ ನಿರಾಸೆ ಖಚಿತ ಎಂದು ಟ್ವೀಟ್ ಮಾಡುವ ಮೂಲಕ ಬಾಂಗ್ಲಾ ಕ್ರಿಕೆಟಿಗರ ಕಾಲೆಳೆದಿದ್ದಾರೆ.