Asianet Suvarna News Asianet Suvarna News

ಏಷ್ಯಾಕಪ್’ನಲ್ಲಿ ಧೋನಿಗೆ ಸರ್ಪೈಸ್ ಕೊಟ್ಟ ಬಿಸಿಸಿಐ..!

199 ಬಾರಿ ಟೀಂ ಇಂಡಿಯಾವನ್ನು ಮುನ್ನಡೆಸಿ ನಾಯಕತ್ವದಿಂದ ಕೆಳಗಿಳಿದಿದ್ದ ಧೋನಿಗೆ 200ನೇ ಪಂದ್ಯದ ನಾಯಕತ್ವ ವಹಿಸಲು ಬಿಸಿಸಿಐ ಅವಕಾಶ ನೀಡಿ ಅಚ್ಚರಿ ಮೂಡಿಸಿತು. ಭಾರತ-ಆಫ್ಘಾನ್ ನಡುವಿನ ಪಂದ್ಯ ರೋಚಕ ಡ್ರಾನಲ್ಲಿ ಅಂತ್ಯವಾಗುವ ಮೂಲಕ ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೂ ಪಾತ್ರವಾಯಿತು.

ದುಬೈ[ಸೆ.26]: ಟೀಂ ಇಂಡಿಯಾದ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಏಷ್ಯಾಕಪ್’ನಲ್ಲಿ ಬಿಸಿಸಿಐ ಬಿಗ್ ಸರ್ಪೈಸ್ ನೀಡಿದೆ. ಟೀಂ ಇಂಡಿಯಾಗೆ ಮೂರು ಪ್ರಮುಖ ಐಸಿಸಿ ಟೂರ್ನಿಗಳನ್ನು [ಟಿ20, ಏಕದಿನ ವಿಶ್ವಕಪ್ ಹಾಗೂ ಚಾಂಪಿಯನ್ಸ್ ಟ್ರೋಫಿ] ಗೆದ್ದುಕೊಟ್ಟ ಧೋನಿಗೆ ಬಿಸಿಸಿಐ ಆಫ್ಘಾನ್ ಪಂದ್ಯಕ್ಕೂ ಮುನ್ನ ಅಚ್ಚರಿ ನೀಡಿತು.

199 ಬಾರಿ ಟೀಂ ಇಂಡಿಯಾವನ್ನು ಮುನ್ನಡೆಸಿ ನಾಯಕತ್ವದಿಂದ ಕೆಳಗಿಳಿದಿದ್ದ ಧೋನಿಗೆ 200ನೇ ಪಂದ್ಯದ ನಾಯಕತ್ವ ವಹಿಸಲು ಬಿಸಿಸಿಐ ಅವಕಾಶ ನೀಡಿ ಅಚ್ಚರಿ ಮೂಡಿಸಿತು. ಭಾರತ-ಆಫ್ಘಾನ್ ನಡುವಿನ ಪಂದ್ಯ ರೋಚಕ ಡ್ರಾನಲ್ಲಿ ಅಂತ್ಯವಾಗುವ ಮೂಲಕ ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೂ ಪಾತ್ರವಾಯಿತು.

Video Top Stories