ಟೀಂ ಇಂಡಿಯಾ ವಿರುದ್ದ ಸೋಲು ಅನುಭವಿಸಿರುವ ಪಾಕಿಸ್ತಾನ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದಾರೆ. ಅಷ್ಟಕ್ಕೂ ಪಾಕ್ ಸೋಲಿಗೆ ಸರ್ಫರಾಜ್ ಖಾನ್ ಮಾತ್ರ ಗುರಿಯಾಗಿದ್ದೇಕೆ? ಇಲ್ಲಿದೆ.
ದುಬೈ(ಸೆ.20): ಏಷ್ಯಾಕಪ್ ಟೂರ್ನಿಯ ಭಾರತ ವಿರುದ್ಧದ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ ಪಾಕಿಸ್ತಾನ ಹೀನಾಯ ಸೋಲು ಕಂಡಿತ್ತು. ಪಾಕ್ ಪ್ರದರ್ಶನಕ್ಕೆ ಟೀಕೆಗಳು ವ್ಯಕ್ತವಾಗಿತ್ತು. ಇದೀಗ ಪಾಕಿಸ್ತಾನ ನಾಯಕ ಸರ್ಫರಾಜ್ ಅಹಮ್ಮದ್ ಟ್ರೋಲ್‌ಗೆ ತುತ್ತಾಗಿದ್ದಾರೆ.
ಸರ್ಫರಾಜ್ ಖಾನ್ ಚಿತ್ರವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿದೆ. ಸೋಲಿನ ಬೆನ್ನಲ್ಲೇ ಸರ್ಫರಾಜ್ ಭಂಗಿ ಟ್ವಿಟರಿಗರ ಕೆಂಗಣ್ಣಿಗೆ ಗುರಿಯಾಗಿದೆ. ಭಾರತ ವಿರುದ್ಧ ಕಳಪೆ ಪ್ರದರ್ಶನದಿಂದ ಬೇಸತ್ತಿದ್ದ ಟ್ವಿಟರಿಗರು, ಸರ್ಫರಾಜ್ ವಿರುದ್ದ ಟ್ರೋಲ್ ಮಾಡಿದ್ದಾರೆ.
