ದುಬೈ(ಸೆ.18): ಏಷ್ಯಾಕಪ್ ಟೂರ್ನಿಯಲ್ಲಿ ಶ್ರೀಲಂಕಾ ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ ಗೆಲುವು ಸಾಧಿಸಿದ ಬಾಂಗ್ಲಾ ಇದೀಗ ಅಫ್ಘಾನಿಸ್ತಾನ ವಿರುದ್ಧದ ಪಂದ್ಯಕ್ಕೆ ತಯಾರಿ ಆರಂಭಿಸಿದೆ.

ಲಂಕಾ ವಿರುದ್ಧ 1 ವಿಕೆಟ್ ಕಬಳಿಸಿ ಬಾಂಗ್ಲಾ ತಂಡಕ್ಕೆ ಮೇಲುಗೈ ತಂದುಕೊಟ್ಟ ಶಕೀಬ್ ಅಲ್ ಹಸನ್ ದಿಢೀರ್ ಟೂರ್ನಿಯಿಂದ ವಾಪಾಸ್ಸಾಗಿದ್ದಾರೆ.  ಶ್ರೀಲಂಕಾ ವಿರುದ್ಧದ ಗೆಲುವಿನ ಬೆನ್ನಲ್ಲೇ ಶಕೀಬ್ ತವರಿಗೆ ಮರಳಿದ್ದಾರೆ.

ಶಕೀಬ್ ಜೊತೆ ಪತ್ನಿ ಹಾಗೂ ಪುತ್ರಿ ಕೂಡ ದುಬೈಗೆ ತೆರಳಿದ್ದರು. ಆದರೆ ದುಬೈ ವಾತಾವರಣಕ್ಕೆ ಶಕೀಬ್ ಪುತ್ರಿ ಅಸ್ವಸ್ಥರಾಗಿದ್ದಾರೆ. ಹೀಗಾಗಿ ಶಕೀಬ್ ಕುಟುಂಬದ ಜೊತೆ ತವರಿಗೆ ಮರಳಿದ್ದಾರೆ. ಸೆಪ್ಟೆಂಬರ್ 19 ಅಥವಾ 20 ರಂದು ತಂಡ ಸೇರಿಕೊಳ್ಳುವುದಾಗಿ ಶಕೀಬ್ ಸ್ಪಷ್ಟಪಡಿಸಿದ್ದಾರೆ.