Asianet Suvarna News Asianet Suvarna News

ಪಾಕ್ ವಿರುದ್ಧದ ಗೆಲುವಿನ ಬೆನ್ನಲ್ಲೇ ಟೀಂ ಇಂಡಿಯಾಗೆ ಶಾಕ್!

ಬದ್ಧವೈರಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಜೊತೆಗೆ ಅಭಿಮಾನಿಗಳ ಸಂತಸವನ್ನ ಇಮ್ಮಡಿಗೊಳಿಸಿದೆ. ಆದರೆ ಭರ್ಜರಿ ಗೆಲುವಿನ ಬೆನ್ನಲ್ಲೇ ಟೀಂ ಇಂಡಿಯಾಗೆ ಆಘಾತ ಎದುರಾಗಿದೆ. ಇಲ್ಲಿದೆ ಡೀಟೇಲ್ಸ್

Asia Cup 2018 Hardik Axar Shardul ruled out-Jadeja comeback after 1 year
Author
Bengaluru, First Published Sep 20, 2018, 3:35 PM IST

ದುಬೈ(ಸೆ.20): ಏಷ್ಯಾಕಪ್ ಟೂರ್ನಿಯಲ್ಲಿ ಬದ್ದವೈರಿ ಪಾಕಿಸ್ತಾನ ವಿರುದ್ಧ 8 ವಿಕೆಟ್ ಭರ್ಜರಿ ಗೆಲುವು ಸಾಧಿಸಿದ ಟೀಂ ಇಂಡಿಯಾ ಇದೀಗ ಸೂಪರ್ 4 ಪಂದ್ಯಗಳಿಗೆ ಸಜ್ಜಾಗುತ್ತಿದೆ. ಆದರೆ  ಪಾಕಿಸ್ತಾನ ವಿರುದ್ಧದ ಗೆಲುವಿನ ಬೆನ್ನಲ್ಲೇ ಟೀಂ ಇಂಡಿಯಾಗೆ ಆಘಾತ ಎದುರಾಗಿದೆ.

ಸೂಪರ್ 4 ಸುತ್ತಿನ ಪಂದ್ಯ ಆರಂಭಕ್ಕೂ ಮುನ್ನ ಟೀಂ ಇಂಡಿಯಾದಲ್ಲಿ  3 ಪ್ರಮುಖ ಬದಲಾವಣೆ ಮಾಡಲಾಗಿದೆ.  ಪಾಕಿಸ್ತಾನ ವಿರುದ್ಧ 18ನೇ ಓವರ್ ಬೌಲಿಂಗ್ ಮಾಡಿದ ಹಾರ್ದಿಕ್ ಪಾಂಡ್ಯ ತೀವ್ರ ಬೆನ್ನು ನೋವಿನಿಂದ ಬಳಲಿದ್ದರು. ಹೀಗಾಗಿ ಬೌಲಿಂಗ್ ಅರ್ಧಕ್ಕೆ ನಿಲ್ಲಿಸಿದ ಪಾಂಡ್ಯರನ್ನ ಸ್ಟ್ರೆಚರ್ ಮೂಲಕ ಚಿಕಿತ್ಸೆಗೆ ಕರೆದೊಯ್ಯಲಾಗಿತ್ತು. ಇದೀಗ ಟೂರ್ನಿಯಿಂದ ಪಾಂಡ್ಯ ಹೊರಬಿದ್ದಿದ್ದಾರೆ.  

 

 

ಪಾಕ್ ವಿರುದ್ಧ ಫೀಲ್ಡಿಂಗ್ ಮಾಡಿದ ಅಕ್ಸರ್ ಪಟೇಲ್ ಕೈರೆಬಳಿಗ ಗಾಯಕ್ಕೆ ತುತ್ತಾಗಿದ್ದಾರೆ.  ಹೀಗಾಗಿ ಅಕ್ಸರ್ ಪಟೇಲ್ ತಂಡದಿಂದ ಹೊರಬಿದ್ದಿದ್ದಾರೆ. ಇನ್ನು ಹಾಂಕಾಂಗ್ ವಿರುದ್ಧ ಆಡೋ ಹನ್ನೊಂದರ ಬಳಗದಲ್ಲಿ ಸ್ಥಾನ  ಪಡೆದಿದ್ದ ಶಾರ್ದೂಲ್ ಠಾಕೂರ್ ಗಾಯಗೊಂಡಿದ್ದರು. ಇದೀಗ ಠಾಕೂರ್ ಕೂಡ ರೂಲ್ಡ್ ಔಟ್ ಆಗಿದ್ದಾರೆ.

ತಂಡದಿಂದ ಹೊರಬಿದ್ದಿರೋ ಮೂವರು ಆಟಗಾರರು ಬದಲು ಆಲ್ರೌಂಡರ್ ರವೀಂದ್ರ ಜಡೇಜಾ, ಯುವ ವೇಗಿ ದೀಪಕ್ ಚಹಾರ್ ಹಾಗೂ ಸಿದ್ಧಾರ್ಥ್ ಕೌಲ್ ಆಯ್ಕೆಯಾಗಿದ್ದಾರೆ. 2017ರಲ್ಲಿ ಕೊನೆಯ ಬಾರಿಗೆ ಏಕದಿನ ತಂಡದಲ್ಲಿ ಕಾಣಿಸಿಕೊಂಡಿದ್ದ ಜಡೇಜಾ ಇದೀಗ ಬರೋಬ್ಬರಿ 1 ವರ್ಷಗಳ ಬಳಿಕ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದಾರೆ.

Follow Us:
Download App:
  • android
  • ios