ಏಷ್ಯಾಕಪ್ ಟೂರ್ನಿ 3ನೇ ದಿನದಲ್ಲಿ ಶ್ರೀಲಂಕಾ ಹಾಗೂ ಆಫ್ಘಾನಿಸ್ತಾನ ತಂಡ ಹೋರಾಟ ನಡೆಸುತ್ತಿದೆ. ಲಂಕಾ ಸೋಲಿನಿಂದ ಹೊರಬರೋ ಯತ್ನದಲ್ಲಿದ್ದರೆ, ಆಫ್ಘಾನ್ ಶುಭಾರಂಭದ ವಿಶ್ವಾಸದಲ್ಲಿದೆ. ಇಲ್ಲಿದೆ ಪಂದ್ಯದ ಅಪ್‌ಡೇಟ್ಸ್.
ದುಬೈ(ಸೆ.17): ಏಷ್ಯಾಕಪ್ ಉದ್ಘಾಟನಾ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಸೋಲು ಅನುಭವಿಸಿದ ಶ್ರೀಲಂಕಾ ಇದೀಗ ಆಫ್ಘಾನಿಸ್ತಾನ ವಿರುದ್ದವೂ ಆರಂಭಿಕ ಹಿನ್ನಡೆ ಅನುಭವಿಸಿದೆ. ವಿಕೆಟ್ ಕಬಳಿಸಲು ಲಂಕಾ ತಂಡದ ಪರದಾಟ ಶುರುವಾಗಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಅಫ್ಘಾನಿಸ್ತಾನ ಉತ್ತಮ ಆರಂಭ ಪಡೆಯಿತು. ಮೊಹಮ್ಮದ್ ಶೆಹಝಾದ್ 34 ರನ್ ಸಿಡಿಸಿ ಔಟಾದರು. ಈ ಮೂಲಕ ಆಫ್ಘಾನ್ ಆರಂಭಿಕರು 57 ರನ್ ಜೊತೆಯಾಟ ನೀಡಿದರು.
ಮತ್ತೊರ್ವ ಆರಂಭಿಕ ಇನ್ಶಾನುಲ್ಲಾ ಜನತ್ 45 ರನ್ ಕಾಣಿಕೆ ನೀಡಿದರು. ಆದರೆ ನಾಯಕ ಅಸ್ಗರ್ ಅಫ್ಘಾನ್ ಕೇವಲ 1ರನ್ ಸಿಡಿಸಿ ನಿರಾಸೆ ಅನುಭವಿಸಿದರು. ಸದ್ಯ ಆಫ್ಘಾನಿಸ್ತಾನ 3 ವಿಕೆಟ್ ನಷ್ಟಕ್ಕೆ 130 ರನ್ ಸಿಡಿಸಿದೆ.
