ಮೊದಲ ಇನ್ನಿಂಗ್ಸ್'ನಲ್ಲಿ ಮಿಂಚಿದ್ದ ಸ್ಪಿನ್ನರ್ ಆರ್. ಅಶ್ವಿನ್ 2ನೇ ಇನ್ನಿಂಗ್ಸ್'ನಲ್ಲೂ 63/4 ವಿಕೇಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.
ನಾಗ್ಪುರ(ನ.27): ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಮತ್ತೊಮ್ಮೆ ಹೊಸ ತಿಹಾಸ ಬರೆದಿದೆ. ಶ್ರೀಲಂಕಾ ವಿರುದ್ಧ 2ನೇ ಟೆಸ್ಟ್'ನಲ್ಲಿ ಇನ್ನಿಂಗ್ಸ್ ಹಾಗೂ 239 ರನ್'ಗಳ ವಿಜಯ ಸಾಧಿಸಿದೆ.
2ನೇ ಇನ್ನಿಂಗ್ಸ್'ನಲ್ಲಿ ನಾಯಕ ಚಂಡಿಮಾಲ್ ಹೊರತುಪಡಿಸಿ ಉಳಿದ ಆಟಗಾರರ್ಯಾರು ಭಾರತದ ಬೌಲರ್'ಗಳಿಗೆ ತಡೆಯಾಗಲಿಲ್ಲ. ದಿನದಾಟ ಆರಂಭವಾದ 39 ಓವರ್'ಗಳಲ್ಲಿ ಲಂಕಾ ಪಡೆ 166 ರನ್'ಗಳಿಗೆ ತನ್ನೆಲ್ಲ ವಿಕೇಟ್ ಕಳೆದುಕೊಂಡಿತು. ಮೊದಲ ಇನ್ನಿಂಗ್ಸ್'ನಲ್ಲಿ ಮಿಂಚಿದ್ದ ಸ್ಪಿನ್ನರ್ ಆರ್. ಅಶ್ವಿನ್ 2ನೇ ಇನ್ನಿಂಗ್ಸ್'ನಲ್ಲೂ 63/4 ವಿಕೇಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು. ಆರ್. ಜಡೇಜಾ, ಉಮೇಶ್ ಯಾದವ್ ಹಾಗೂ ಇಶಾಂತ್ ಶರ್ಮಾ ಕೂಡ ತಲಾ 2 ವಿಕೇಟ್'ಗಳನ್ನು ಕಬಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ವೇಗದ 300 ವಿಕೇಟ್ ಕಿತ್ತ ಅಶ್ವಿನ್
ಸ್ಪಿನ್ನರ್ ಆರ್ ಅಶ್ವಿನ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ವೇಗವಾಗಿ 300 ವಿಕೇಟ್ ಪಡೆದ ಗೌರವಕ್ಕೆ ಪಾತ್ರರಾದರು. ಕೇವಲ 54 ಪಂದ್ಯಗಳಲ್ಲಿ 300 ವಿಕೇಟ್ ಪಡೆದ ಗೌರವಕ್ಕೆ ಪಾತ್ರರಾದರು. ಈ ಜಯದೊಂದಿಗೆ ಭಾರತ 3 ಟೆಸ್ಟ್'ಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ.
ಸ್ಕೋರ್
ಶ್ರೀಲಂಕಾ 205 ಹಾಗೂ 166
(ಚಂಡಿಮಾಲ್ 61, ಆರ್. ಅಶ್ವಿನ್ 63/4, ಆರ್. ಜಡೇಜಾ 28/2, ಯು.ಯಾದವ್ 30/2, ಇಶಾಂತ್ 43/2)
ಭಾರತ 610/6 ಡಿಕ್ಲೇರ್ಡ್
ಫಲಿತಾಂಶ: ಭಾರತಕ್ಕೆ ಇನ್ನಿಂಗ್ಸ್ ಹಾಗೂ 239 ರನ್'ಗಳ ಜಯ
ಸರಣಿ 1-0 ಮುನ್ನಡೆ
