ಟೀಂ ಇಂಡಿಯಾ ಮಾಜಿ ನಾಯಕ ಮನ್ಸೂರ್ ಅಲಿ ಖಾನ್ ಪಟೌಡಿ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಕಾವೇರಿ ನೀರು ಕುರಿತ ಒಂದು ಹಾಸ್ಯ ಪ್ರಸಂಗ ನಡೆಯಿತು.
ಬೆಂಗಳೂರು(ಮಾ.09): ಟೀಂ ಇಂಡಿಯಾ ಮಾಜಿ ನಾಯಕ ಮನ್ಸೂರ್ ಅಲಿ ಖಾನ್ ಪಟೌಡಿ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಕಾವೇರಿ ನೀರು ಕುರಿತ ಒಂದು ಹಾಸ್ಯ ಪ್ರಸಂಗ ನಡೆಯಿತು.
ನಿನ್ನೆ ಬೆಂಗಳೂರಿನಲ್ಲಿ ಬಿಸಿಸಿಐ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾಜಿ ಕ್ರಿಕೆಟಿಗ ಫಾರೂಕ್ ಇಂಜಿನಿಯರ್ ಉಪನ್ಯಾಸ ನೀಡಿದರು. ಇದೇ ಕಾರ್ಯಕ್ರಮದಲ್ಲಿ ಆರ್. ಅಶ್ವಿನ್ ಅವರಿಗೆ ದಿಲೀಪ್ ಸರ್ದೇಸಾಯಿ ಸ್ಮಾರಕ ಪ್ರಶಸ್ತಿ ಪಡೆದರು. ಅಶ್ವಿನ್ಗೆ ಪ್ರಶಸ್ತಿ ನೀಡಿದ ಫಾರೂಕ್ ಎಂಜಿನಿಯರ್, ‘ಸ್ಪಿನ್ನರ್‌ಗಳಾದ ಪ್ರಸನ್ನ, ಚಂದ್ರಶೇಖರ್ ಮತ್ತು ನಿಮ್ಮನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದ ಕರ್ನಾಟಕದ ನೀರಿನಲ್ಲಿ ಅಂತಹದ್ದೇನು ಗುಣವಿದೆ..?’ ಎಂದು ಕೇಳಿದರು. ಪ್ರಶ್ನೆಯ ಸೂಕ್ಷ್ಮವನ್ನು ಗ್ರಹಿಸಿದ ತಮಿಳುನಾಡಿನ ಅಶ್ವಿನ್, ‘ನನ್ನ ಮಾತುಗಳಿಗೂ ರಾಜಕೀಯಕ್ಕೂ ಸಂಬಂಧವಿಲ್ಲ. ತಮಿಳುನಾಡಿನಲ್ಲಿ ನಮಗೆ ಇತ್ತೀಚೆಗೆ ಕಾವೇರಿ ನೀರು ಲಭಿಸಿದೆ’ ಎಂದರು.
ಕ್ರಿಕೆಟಿಗನ ಈ ಹಾಸ್ಯಭರಿತ ಉತ್ತರ ಕಾರ್ಯಕ್ರಮದಲ್ಲಿದ್ದ ಪ್ರೇಕ್ಷಕರ ಮುಖದಲ್ಲಿ ನಗು ತರಿಸಿದ್ದು ಮಾತ್ರ ನಿಜ..
