ಮುಂಬೈ(ಡಿ.09): ಮುಂಬೈ ಟೆಸ್ಟ್`​ನಲ್ಲಿ 6 ವಿಕೆಟ್ ಪಡೆಯುವ ಮೂಲಕ ಭಾರತದ ಭರವಸೆಯ ಬೌಲರ್ ಆರ್. ಅಶ್ವಿನ್ ಹೊಸ ದಾಖಲೆ ಬರೆದಿದ್ದಾರೆ. ಒಟ್ಟಾರೆ 23 ಸಲ ಮತ್ತು ಭಾರತದಲ್ಲಿ 18ನೇ ಸಲ ಐದಕ್ಕೂ ಅಧಿಕ ವಿಕೆಟ್ ಸಾಧನೆ ಮಾಡಿದ್ದಾರೆ.

ಕಪಿಲ್ ದೇವ್​ ಸಹ 23 ಸಲ ಐದು ವಿಕೆಟ್ ಗೊಂಚಲು ಪಡೆದಿದ್ದರು. ಈಗ ಅವರ ದಾಖಲೆಯನ್ನ ಅಶ್ವಿನ್ ಸರಿಗಟ್ಟಿದ್ದಾರೆ. ಅನಿಲ್ ಕುಂಬ್ಳೆ 35 ಮತ್ತು ಹರ್ಭಜನ್ ಸಿಂಗ್​ 25 ಸಲ ಐದಕ್ಕೂ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.