ಟೀಂ ಇಂಡಿಯಾದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌ಗೆ ೨೦೧೬ರ ವರ್ಷ ಮರೆಯಾಗದ ವರ್ಷವಾಗಿದೆ.
ಚೆನ್ನೈ (ಡಿ. 26): ಟೀಂ ಇಂಡಿಯಾದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ಗೆ ೨೦೧೬ರ ವರ್ಷ ಮರೆಯಾಗದ ವರ್ಷವಾಗಿದೆ.
ವೃತ್ತಿಜೀವನದಲ್ಲಿ ಕೆಲವಾರು ಸಾಧನೆಗಳ ಜತೆಗೆ ಐಸಿಸಿಯ ಎರಡು ವಾರ್ಷಿಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇದೀಗ, ಅವರು ಎರಡನೇ ಮಗುವಿನ ತಂದೆಯಾಗಿದ್ದು, ಅವರ ಸಂಭ್ರಮಕ್ಕೆ ಮತ್ತೊಂದು ಕಾರಣವನ್ನು ಕೊಟ್ಟಿದೆ. ಮೊದಲ ಮಗು ಹೆಣ್ಣು ಮಗುವಾಗಿತ್ತು. ಇದೀಗ, ಎರಡನೇ ಹೆಣ್ಣು ಮಗುವಿಗೆ ಅವರು ತಂದೆಯಾಗಿದ್ದಾರೆ. ಆದರೆ, ಇಲ್ಲೊಂದು ಟ್ವಿಸ್ಟ್ ಇದೆ. ಡಿ. 21 ಕ್ಕೇ ಹೆಣ್ಣು ಮಗುವಿನ ಜನನವಾಗಿದ್ದರೂ, ಚೆನ್ನೈನಲ್ಲೇ ನಡೆದಿದ್ದ ಆಂಗ್ಲರ ವಿರುದ್ಧದ ಟೆಸ್ಟ್ ಪಂದ್ಯದ ಗೆಲುವಿನ ಗುಂಗಿನಲ್ಲಿದ್ದ ಅಶ್ವಿನ್ ಅವರ ಮೂಡ್ ಬದಲಾಗದಿರಲೆಂದು ಈ ರೀತಿ ಮಾಡಿದ್ದಾಗಿ, ಅಶ್ವಿನ್ ಪತ್ನಿ ಪ್ರೀತಿ ಟ್ವಿಟರ್ನಲ್ಲಿ ಹೇಳಿಕೊಂಡಿದ್ದಾರೆ.
