Asianet Suvarna News Asianet Suvarna News

ಕಾನ್ಪುರ ಟೆಸ್ಟ್`ನಲ್ಲಿ ಅಶ್ವಿನ್, ಜಡೇಜಾ ಸ್ಪಿನ್ ಮೋಡಿ: ಉತ್ತಮ ಸ್ಥಿತಿಯಲ್ಲಿ ಭಾರತ

3ನೇ ದಿನದಾಟದಂತ್ಯಕ್ಕೆ ಭಾರತ 215 ರನ್`ಗಳ ಲೀಡ್ ಪಡೆದಿದೆ.

ashwin and jadeja spin magic in kanpur

ಕಾನ್ಪುರ(ಸೆ.24): ಕಾನ್ಪುರದಲ್ಲಿ ನಡೆಯುತ್ತಿರುವ ಐತಿಹಾಸಿಕ 500ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಉತ್ತಮ ಸ್ಥಿತಿಯಲ್ಲಿದೆ. ನಿನ್ನೆ ಒಂದೇ ವಿಕೆಟ್ ಕಳೆದುಕೊಂಡು 152 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ನ್ಯೂಜಿಲೆಂಡ್ ತಂಡವನ್ನ ಕೇವಲ 262 ರನ್`ಗಳಿಗೆ ಆಲೌಟ್ ಮಾಡುವ ಮೂಲಕ ಭಾರತ ತಂಡ ಕಮ್ ಬ್ಯಾಕ್ ಮಾಡುವ ಮೂಲಕ ನ್ನಿಂಗ್ಸ್ ಮುನ್ನಡೆ ಪಡೆಯಿತು.

ನಿನ್ನೆ ತಲಾ ಅರ್ಧಶತಕ ಸಿಡಿಸಿ ಕ್ರೀಸ್`ಗೆ ಅಂಟಿ ಕುಳಿತಿದ್ದ ಲಾಥಮ್ ಮತ್ತು ವಿಲಿಯಮ್ ಸನ್`ಗೆ ಅಶ್ವಿನ್ ಮತ್ತು ಜಡೇಜಾ ಪೆಲಿವಿಯನ್ ದಾರಿ ತೋರಿಸಿದರು. ಇದಾದ ಬಳಿಕ ಯಾರೊಬ್ಬರನ್ನೂ ಹೆಚ್ಚು ಕಾಲ ಕ್ರೀಸಿನಲ್ಲಿ ಉಳಿಯಲು ಬಿಡಲಿಲ್ಲ ಈ ಸ್ಪಿನ್ ಮಾಂತ್ರಿಕರು. ಬಳಿಕ ಬಂದವರೆಲ್ಲ ಪೆವಿಲಿಯನ್ ಪರೇಡ್ ನಡೆಸಿದರು. 262 ರನ್`ಗಳಿಗೆ ಆಲೌಟ್ ಆದ ನ್ಯೂಜಿಲೆಂಡ್ 55 ರನ್`ಗಳ ಹಿನ್ನಡೆ ಅನುಭವಿಸಿತು. ಮೂವರು ಬ್ಯಾಟ್ಸ್`ಮನ್`ಗಳು ಶೂನ್ಯ ಸುತ್ತಿದ್ದರು. ಶ್ರೇಷ್ಠ ಬೌಲಿಂಗ್ ಪ್ರದರ್ಶನ ನೀಡಿದ ಜಡೇಜಾ 5 ಮತ್ತು ಅಶ್ವಿನ್ 4 ವಿಕೆಟ್ ಕಬಳಿಸಿದರು.

55 ರನ್`ಗಳ ಇನ್ನಿಂಗ್ಸ್ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡ ಉತ್ತಮ ಆರಂಭ ಪಡೆದಿದೆ. ಕೆ.ಎಲ್. ರಾಹುಲ್ 38 ರನ್`ಗಳಿಗೆ ನಿರ್ಗಮಿಸಿದ ಬಳಿಕ ಕ್ರೀಸ್`ಗೆ ಕಚ್ಚಿ ನಿಂತಿರುವ ಮುರಳಿ ವಿಜಯ್(64), ಚೆತೇಶ್ವರ್ ಪೂಜಾರ(50) ತಲಾ ಅರ್ಧಶತಕ ಸಿಡಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಭಾರತ 3ನೇ ದಿನದಾಟದಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 159/1 ರನ್ ಗಳಿಸಿದ್ದು, ಒಟ್ಟಾರೆ 215 ರನ್`ಗಳ ಲೀಡ್ ಪಡೆದಿದೆ.

ಸಂಕ್ಷಿಪ್ತ ಸ್ಕೋರ್:

ಮೊದಲ ಇನ್ನಿಂಗ್ಸ್

ಭಾರತ - 318 ರನ್`ಗೆ ಆಲೌಟ್

ನ್ಯೂಜಿಲೆಂಡ್ - 262ಕ್ಕೆ ಆಲೌಟ್

ಬೌಲಿಂಗ್:

ರವೀಂದ್ರ ಜಡೇಜಾ - 73/5

ಆರ್. ಅಶ್ವಿನ್ - 93/4

 

2ನೇ ಇನ್ನಿಂಗ್ಸ್ - 3ನೇ ದಿನದಾಟದಂತ್ಯಕ್ಕೆ

ಭಾರತ - 159/1

ಮುರಳಿ ವಿಜಯ್ - 64 ರನ್

ಚೆತೇಶ್ವರ್ ಪೂಜಾರ - 50 ರನ್