ಟ್ವೀಟರ್‌'ನಲ್ಲಿ ಅಶ್ವಿನ್ ಶೂ ಬ್ರಾಂಡ್‌'ವೊಂದರ ಪ್ರಚಾರ ನಡೆಸಿದ್ದರು. ಇದಕ್ಕೆ ಗಿಬ್ಸ್ ‘ಅಶ್ವಿನ್ ನೀವೀಗ ಇನ್ನಷ್ಟು ಬೇಗ ಓಡಬಹುದು’ ಎಂದು ತಮಾಷೆಯಾಗಿ ಪ್ರತಿಕ್ರಿಯಿಸಿದ್ದರು. ಗಿಬ್ಸ್ ತಮಾಷೆಯಿಂದ ಕೋಪೋದ್ರಿಕ್ತರಾದ ಅಶ್ವಿನ್, ‘ಖಂಡಿತವಾಗಿಯೂ ನಿಮ್ಮಷ್ಟು ವೇಗವಾಗಿ ಓಡಲು ನನ್ನಿಂದ ಸಾಧ್ಯವಿಲ್ಲ. ನಿಮ್ಮಂತೆ ನನಗೆ ಆ ಕಲೆ ಒಲಿದಿಲ್ಲ. ಆದರೆ ನನಗೆ ಅನ್ನ ನೀಡುತ್ತಿರುವ ಕ್ರಿಕೆಟ್ ಆಟಕ್ಕೆ ಮೋಸ ಮಾಡದೆ, ಮ್ಯಾಚ್ ಫಿಕ್ಸ್ ಮಾಡದೆ ಆಡಬೇಕು ಎನ್ನುವಷ್ಟು ಬುದ್ಧಿ ಒಲಿದಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ನವದೆಹಲಿ(ಫೆ.20): ಭಾರತ ಕ್ರಿಕೆಟ್ ತಂಡದ ಆಫ್ ಸ್ಪಿನ್ನರ್ ರವಿಚಂದ್ರನ್ ಸಾಮಾಜಿಕ ತಾಣ ಟ್ವೀಟರ್‌ನಲ್ಲಿ ಹೊಸದೊಂದು ವಿವಾದ ಸೃಷ್ಟಿಸಿದ್ದಾರೆ. ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಹರ್ಷಲ್ ಗಿಬ್ಸ್ ಮಾಡಿದ ತಮಾಷೆಯೊಂದಕ್ಕೆ ಕಟುವಾಗಿ ಪ್ರತಿಕ್ರಿಯಿಸಿ, ಕ್ಷುಲಕ ಕಾರಣಕ್ಕೆ ಅನಗತ್ಯ ವಿಚಾರಗಳ ಬಗ್ಗೆ ಪ್ರಸ್ತಾಪಿಸಿ ಟೀಕೆಗೆ ಗುರಿಯಾಗಿದ್ದಾರೆ.

ಆಗಿದ್ದೇನು?: ಟ್ವೀಟರ್‌'ನಲ್ಲಿ ಅಶ್ವಿನ್ ಶೂ ಬ್ರಾಂಡ್‌'ವೊಂದರ ಪ್ರಚಾರ ನಡೆಸಿದ್ದರು.

Scroll to load tweet…

ಇದಕ್ಕೆ ಗಿಬ್ಸ್ ‘ಅಶ್ವಿನ್ ನೀವೀಗ ಇನ್ನಷ್ಟು ಬೇಗ ಓಡಬಹುದು’ ಎಂದು ತಮಾಷೆಯಾಗಿ ಪ್ರತಿಕ್ರಿಯಿಸಿದ್ದರು.

Scroll to load tweet…

ಗಿಬ್ಸ್ ತಮಾಷೆಯಿಂದ ಕೋಪೋದ್ರಿಕ್ತರಾದ ಅಶ್ವಿನ್, ‘ಖಂಡಿತವಾಗಿಯೂ ನಿಮ್ಮಷ್ಟು ವೇಗವಾಗಿ ಓಡಲು ನನ್ನಿಂದ ಸಾಧ್ಯವಿಲ್ಲ. ನಿಮ್ಮಂತೆ ನನಗೆ ಆ ಕಲೆ ಒಲಿದಿಲ್ಲ. ಆದರೆ ನನಗೆ ಅನ್ನ ನೀಡುತ್ತಿರುವ ಕ್ರಿಕೆಟ್ ಆಟಕ್ಕೆ ಮೋಸ ಮಾಡದೆ, ಮ್ಯಾಚ್ ಫಿಕ್ಸ್ ಮಾಡದೆ ಆಡಬೇಕು ಎನ್ನುವಷ್ಟು ಬುದ್ಧಿ ಒಲಿದಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ಅಶ್ವಿನ್‌ರ ಅನಿರೀಕ್ಷಿತ ಪ್ರತಿಕ್ರಿಯೆಯಿಂದ ಗೊಂದಲಕ್ಕೆ ಒಳಗಾದ ಗಿಬ್ಸ್, ‘ನೀವು ತಮಾಷೆಯನ್ನು ಸ್ವೀಕರಿಸುವುದಿಲ್ಲ ಎನಿಸುತ್ತದೆ. ಸರಿ, ಈ ವಿಷಯ ಇಲ್ಲಿಗೆ ಬಿಟ್ಟು ಮುಂದೆ ಹೋಗೋಣ’ ಎಂದಿದ್ದಕ್ಕೆ ಮರು ಉತ್ತರಿಸಿದ ಅಶ್ವಿನ್ ‘ನನ್ನ ಪ್ರತಿಕ್ರಿಯೆ ಸಹ ತಮಾಷೆಯಾಗಿಯೇ ಇತ್ತು ಎಂದು ನಾನು ನಂಬಿದ್ದೆ. ಆದರೆ ಜನ ಹಾಗೂ ನೀವು ಇದನ್ನು ಹೇಗೆ ಸ್ವೀಕರಿಸಿದಿರಿ ನೋಡಿ. ನಾವು ಒಟ್ಟಿಗೆ ಕೂತು ಈ ಬಗ್ಗೆ ಚರ್ಚಿಸೋಣ’ ಎಂದು ಬರೆದಿದ್ದಾರೆ.

Scroll to load tweet…
Scroll to load tweet…

ಫಿಕ್ಸಿಂಗ್ ಬಗ್ಗೆ ಪ್ರಸ್ತಾಪಿಸಿದ್ದೇಕೆ?: 2000ರ ದ.ಆಫ್ರಿಕಾದ ಭಾರತ ಪ್ರವಾಸ ವೇಳೆ ಹರ್ಷಲ್ ಗಿಬ್ಸ್ ಮ್ಯಾಚ್ ಫಿಕ್ಸಿಂಗ್ ವಿವಾದದಲ್ಲಿ ಸಿಲುಕಿದ್ದರು. ನಾಯಕ ಹ್ಯಾನ್ಸಿ ಕ್ರೊನಿಯಾ ಸೇರಿದಂತೆ ನಾಲ್ವರು ಆಟಗಾರರ ವಿರುದ್ಧ ಪ್ರಕರಣ ದಾಖಲಾಗಿತ್ತು. ಬುಕ್ಕಿಗಳನ್ನು ಸಂಪರ್ಕಿಸಿ ಮಾತುಕತೆ ನಡೆಸಿದ್ದರಾದರೂ ಫಿಕ್ಸಿಂಗ್ ನಡೆಸಲು ಗಿಬ್ಸ್ ಒಪ್ಪಿಕೊಂಡಿರಲಿಲ್ಲ. ಆದರೆ ಅವರನ್ನು 6 ತಿಂಗಳು ಅಮಾನತುಗೊಳಿಸಿ, ದಂಡ ವಿಧಿಸಲಾಗಿತ್ತು.