ನೆಹ್ರಾ ಹುಟ್ಟುಹಬ್ಬಕ್ಕೆ ಸೆಹ್ವಾಗ್ ಸೇರಿದಂತೆ ಕ್ರಿಕೆಟ್ ಜಗತ್ತು ಶುಭಕೋರಿದ್ದು ಹೀಗೆ...
ನವದೆಹಲಿ(ಏ.29): ಭಾರತ ತಂಡದ ಹಿರಿಯ ಅನುಭವಿ ವೇಗಿ ಆಶೀಶ್ ನೆಹ್ರಾ ಇಂದು 38ನೇ ವಸಂತಕ್ಕೆ ಕಾಲಿರಿಸಿದ್ದಾರೆ. ವೇಗದ ಬೌಲರ್'ಆಗಿ ಇಂದಿಗೂ ಟೀಂ ಇಂಡಿಯಾದ ಬೇಡಿಕೆಯ ಬೌಲರ್ ಎನಿಸಿಕೊಂಡಿದ್ದಾರೆ ಎಂದರೇ ನಿಜಕ್ಕೂ ಆಶ್ಚರ್ಯವಾಗಬಹುದು.
ಐಪಿಎಲ್'ನಲ್ಲಿ ಇದುವರೆಗೂ ಮುಂಬೈ ಇಂಡಿಯನ್ಸ್, ಡೆಲ್ಲಿ ಡೇರ್'ಡೆವಿಲ್ಸ್, ಸನ್'ರೈಸರ್ಸ್ ಹೈದರಾಬಾದ್ ಸೇರಿದಂತೆ ಒಟ್ಟು ಐದು ತಂಡಗಳನ್ನು ನೆಹ್ರಾ ಪ್ರತಿನಿಧಿಸಿದ್ದು ಮಾತ್ರವಲ್ಲದೇ ಡೆತ್ ಓವರ್ ಸ್ಪೆಷಲಿಸ್ಟ್ ಎಂದೇ ಗುರುತಿಸಿಕೊಂಡಿದ್ದಾರೆ.
1999ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್'ಗೆ ಕಾಲಿರಿಸಿದ ನೆಹ್ರಾ ಇಂದಿಗೂ ಬೌಲಿಂಗ್'ನಲ್ಲಿ ಕಮಾಲ್ ಮಾಡುತ್ತಿದ್ದಾರೆ. ನೆಹ್ರಾ ಹುಟ್ಟುಹಬ್ಬಕ್ಕೆ ಸೆಹ್ವಾಗ್ ಸೇರಿದಂತೆ ಕ್ರಿಕೆಟ್ ಜಗತ್ತು ಶುಭಕೋರಿದ್ದು ಹೀಗೆ...
On his birthday, watch the highlights of Ashish Nehra's brilliant 6/23 against England at the @cricketworldcup in 2003! pic.twitter.com/NPs4Xv7g5J
— ICC (@ICC) 29 April 2017
