Asianet Suvarna News Asianet Suvarna News

ರಿಯೋ ಭಾರತಕ್ಕೆ ಮತ್ತೊಂದು ಚಿನ್ನ:ವಿಶ್ವದಾಖಲೆ ನಿರ್ಮಿಸಿದ ದೇವೇಂದ್ರ ಜಾಜರಿಯಾ

another gold for india
  • Facebook
  • Twitter
  • Whatsapp

ರಿಯೋ ಡಿ ಜನೈರೋ(ಸೆ.14): ಭಾರತದ ಪ್ಯಾರಾ ಅಥ್ಲೀಟ್ ದೇವೇಂದ್ರ ಜಾಜರಿಯಾ ರಿಯೋ ಪ್ಯಾರಾಲಿಂಪಿಕ್ಸ್ ಎಫ್ 46 ಜಾವೆಲಿನ್ ಥ್ರೋದಲ್ಲಿ ವಿಶ್ವದಾಖಲೆಯೊಂದಿಗೆ ಚಿನ್ನ ಗೆದ್ದಿದ್ದಾರೆ. ತಮ್ಮದೇ ದಾಖಲೆಯನ್ನು ಮುರಿದು ಹೊಸ ದಾಖಲೆ ಸ್ಥಾಪಿಸಿದ ವಿಶಿಷ್ಟ ಸಾಧನೆಯನ್ನು ದೇವೇಂದ್ರ ಮಾಡಿದ್ದಾರೆ.

2004ರ ಅಥೆನ್ಸ್ ಒಲಿಂಪಿಕ್ಸ್​ನಲ್ಲಿ 62.15 ಮೀಟರ್ ಎಸೆದು ವಿಶ್ವದಾಖಲೆ ನಿರ್ಮಿಸಿದ್ದ ದೇವೇಂದ್ರ, ಭಾರತದ ಪರ ಪ್ಯಾರಾಲಿಂಪಿಕ್ಸ್​ನಲ್ಲಿ ಎರಡು ಚಿನ್ನದ ಪದಕ ಗೆದ್ದ ಏಕೈಕ ಸಾಧಕ ಎನಿಸಿದರು. 36 ವರ್ಷದ ಜಜಾರಿಯಾ ಈ ಬಾರಿ 63.97 ಮೀಟರ್ ಜಾವೆಲಿನ್ ಎಸೆಯುವ ಮೂಲಕ ನೂತನ ದಾಖಲೆ ಬರೆದಿದ್ದಾರೆ.

ಇದೇ ಸ್ಪರ್ಧೇಯಲ್ಲಿ ಭಾರತದ ರಿಂಕೂ ಹೂಡಾ 54.39 ಮೀಟರ್​ ದೂರ ಎಸೆಯುವ ಮೂಲಕ ಐದನೇ ಸ್ಥಾನಕ್ಕೆ ತೃಪ್ತಿಪಟ್ಟಿಕೊಂಡ್ರು. ಆದರೆ ಸುಂದರ್ ಸಿಂಗ್ ಗುರ್ಜರ್ ಸ್ಪರ್ಧೆಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ದೇವೇಂದ್ರ ಜಾಜರಿಯಾ ವಿಶ್ವ ಶ್ರೇಯಾಂಕದಲ್ಲಿ ಮೂರನೆ ಸ್ಥಾನ​ ಹೊಂದಿದ್ದಾರೆ.


 

Follow Us:
Download App:
  • android
  • ios