ಭಾರತದ ಮಾಜಿ ಸ್ಫೋಟಕ ಬ್ಯಾಟ್ಸ್'ಮೆನ್ ವೀರೇಂದ್ರ ಸೆಹ್ವಾಗ್ ಸೇರಿದಂತೆ 6 ಮಂದಿ ಅರ್ಜಿ ಸಲ್ಲಿಸಿದ್ದಾರೆ.
ಮುಂಬೈ(ಜೂ.01): ಅನಿಲ್ ಕುಂಬ್ಳೆ ಅವರ ಮುಖ್ಯ ಕೋಚ್ ಅವಧಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ನಂತರ ಮುಕ್ತಾಯವಾಗಲಿದ್ದು, ಬಿಸಿಸಿಐ ಈಗಾಗಲೇ ಅರ್ಜಿ'ಗಳನ್ನು ಆಹ್ವಾನಿಸಿದ್ದು, ಭಾರತದ ಮಾಜಿ ಸ್ಫೋಟಕ ಬ್ಯಾಟ್ಸ್'ಮೆನ್ ವೀರೇಂದ್ರ ಸೆಹ್ವಾಗ್ ಸೇರಿದಂತೆ 6 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಇವರಲ್ಲಿ ಕನ್ನಡಿಗ ರಾಜ್ಯ ರಣಜಿ ತಂಡದ ಮಾಜಿ ವೇಗದ ಬೌಲರ್ ದೊಡ್ಡ ಗಣೇಶ್ ಕೂಡ ಪಟ್ಟಿಯಲ್ಲಿದ್ದಾರೆ.
ಇನ್ನುಳಿದಂತೆ ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ ಹಾಗೂ ಶ್ರೀಲಂಕಾ ತಂಡದ ಮಾಜಿ ಕೋಚ್ ಟಾಮ್ ಮೂಡಿ, ಲಾಲ್ಚಂದ್ ರಜಪೂತ್ ಅರ್ಜಿ ಸಲ್ಲಿಸಿದ್ದಾರೆ. ಜೊತೆಗೆ ಹಾಲಿ ಕೋಚ್ ಅನಿಲ್ ಕುಂಬ್ಳೆ ಕೂಡ ರೇಸ್'ನಲ್ಲಿದ್ದಾರೆ. ಅರ್ಜಿ ಸಲ್ಲಿಸಲು ಮೇ 31 ಚಾಂಪಿಯನ್ಸ್ ಟ್ರೋಪಿ ಮುಗಿದ ಕೂಡಲೇ ಬಿಸಿಸಿಐ ಆಯ್ಕೆ ಪ್ರಕ್ರಿಯೆ ಶುರು ಮಾಡಲಿದ್ದು, ಗಂಗೂಲಿ, ಸಚಿನ್, ಲಕ್ಷ್ಮಣ್ ನೇತೃತ್ವದ ಸಮಿತಿ ನೂತನ ಕೋಚ್ ಅವರನ್ನು ಸಂದರ್ಶಿಸಿ ಅತ್ಯುತ್ತಮರಾದವರನ್ನು ಬಿಸಿಸಿಐ'ಗೆ ಶಿಫಾರಸ್ಸು ಮಾಡಲಿದೆ.
