Asianet Suvarna News Asianet Suvarna News

ಕೋಚ್ ಕುಂಬ್ಳೆ ಮೇಲೆ ತೂಗುಗತ್ತಿ

ಒಂದೊಮ್ಮೆ ಭಾರತ ಕ್ರಿಕೆಟ್‌ ತಂಡ ಚಾಂಪಿಯನ್ಸ್‌ ಟ್ರೋಫಿ ಗೆದ್ದರೂ ಅನಿಲ್‌ ಕುಂಬ್ಳೆ ಅವರೇ ತಂಡದ ಮುಖ್ಯ ತರಬೇತುದಾರರಾಗಿ ಮುಂದುವರಿಯಲಿ­ದ್ದಾರೆ ಎಂದು ಯಾವುದೇ ಖಾತರಿ ನೀಡಲು ಸಾಧ್ಯವಿಲ್ಲ ಎಂದು ಬಿಸಿಸಿಐ ತಿಳಿಸಿದೆ. ಭಾರತ ಕ್ರಿಕೆಟ್‌ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ತಂಡದ ಮುಖ್ಯ ತರಬೇತುದಾರ ಅನಿಲ್‌ ಕುಂಬ್ಳೆ ಅವರ ಒಂದು ವರ್ಷದ ಗುತ್ತಿಗೆ ಅವಧಿ ಜೂನ್‌ ಅಂತ್ಯಕ್ಕೆ, ಅಂದರೆ ಚಾಂಪಿಯನ್ಸ್‌ ಟ್ರೋಫಿ ಬಳಿಕ ಪೂರ್ಣಗೊಳ್ಳಲಿದೆ. 

Anil Kumble Is In Danger
  • Facebook
  • Twitter
  • Whatsapp

ನವದೆಹಲಿ(ಮೇ.12): ಒಂದೊಮ್ಮೆ ಭಾರತ ಕ್ರಿಕೆಟ್‌ ತಂಡ ಚಾಂಪಿಯನ್ಸ್‌ ಟ್ರೋಫಿ ಗೆದ್ದರೂ ಅನಿಲ್‌ ಕುಂಬ್ಳೆ ಅವರೇ ತಂಡದ ಮುಖ್ಯ ತರಬೇತುದಾರರಾಗಿ ಮುಂದುವರಿಯಲಿ­ದ್ದಾರೆ ಎಂದು ಯಾವುದೇ ಖಾತರಿ ನೀಡಲು ಸಾಧ್ಯವಿಲ್ಲ ಎಂದು ಬಿಸಿಸಿಐ ತಿಳಿಸಿದೆ. ಭಾರತ ಕ್ರಿಕೆಟ್‌ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ತಂಡದ ಮುಖ್ಯ ತರಬೇತುದಾರ ಅನಿಲ್‌ ಕುಂಬ್ಳೆ ಅವರ ಒಂದು ವರ್ಷದ ಗುತ್ತಿಗೆ ಅವಧಿ ಜೂನ್‌ ಅಂತ್ಯಕ್ಕೆ, ಅಂದರೆ ಚಾಂಪಿಯನ್ಸ್‌ ಟ್ರೋಫಿ ಬಳಿಕ ಪೂರ್ಣಗೊಳ್ಳಲಿದೆ. 

ಈ ಕುರಿತು ಪ್ರತಿಕ್ರಿಯಿಸಿರುವ ಬಿಸಿಸಿಐನ ಅಧಿಕಾರಿಯೊಬ್ಬರು, ಕುಂಬ್ಳೆಯವರ ನಡವಳಿಕೆ ಸಹ ಇಲ್ಲಿ ಪರಿಗಣನೆಗೆ ಬರಲಿದೆ ಎಂದಿದ್ದಾರೆ. ‘‘ಒಂದೊಮ್ಮೆ ಭಾರತ ಚಾಂಪಿಯನ್ಸ್‌ ಟ್ರೋಫಿಯನ್ನು ಉಳಿಸಿಕೊಂಡರೂ ಕುಂಬ್ಳೆ ಮುಂದುವರಿಯುವ ಸಾಧ್ಯತೆ 50-50ರಷ್ಟುಇರಲಿದೆ. ಅವರಿಗೆ ಸಮಯವಿದೆ. ಅವರು ಮತ್ತೊಮೆ ಶಿಷ್ಟಾಚಾರ ಉಲ್ಲಂಘಿಸಿದರೆ, ಅವರ ಮೇಲೆ ಮತ್ತಷ್ಟುನಕಾರಾತ್ಮಕ ಭಾವನೆ ಮೂಡಲಿದೆ'' ಎಂದಿದ್ದಾರೆ.

ಒಂದೊಮ್ಮೆ ಕುಂಬ್ಳೆ ಅವರನ್ನು ಕೋಚ್‌ ಸ್ಥಾನದಿಂದ ಕೆಳಗಿಳಿಸಿದರೆ ವಿರಾಟ್‌ ಕೊಹ್ಲಿ ಹಾಗೂ ತಂಡ ಗೆಲುವು ಸಾಧಿಸುತ್ತಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘‘ಅಂದರೆ ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ ಎಂದರೆ ಅದರಲ್ಲಿ ಕೋಚ್‌ ಮಾತ್ರ ಜವಾಬ್ದಾರ. ಆಟಗಾರರ ಪಾತ್ರ ಏನು ಇಲ್ಲವೇ? ಹಾಗಾದರೆ ಪ್ರತಿಭಾವಂತ ಆಟಗಾರರು ಏಕೆ ಬೇಕು. ನಾಲ್ಕೈದು ಪ್ರತಿಭಾವಂತ ಕೋಚ್‌ಗಳಿದ್ದರೆ ಸಾಕಾ'' ಎಂದು ಪ್ರಶ್ನಿಸಿದ್ದಾರೆ. 

ಮುಸುಕಿನ ಗುದ್ದಾಟ: ಪ್ರತಿ ಬಾರಿ ಎಲ್ಲಾ ಸಮಸ್ಯೆಗಳಿಗೂ ಆಡಳಿತ ಮಂಡಳಿ ಬಾಗಿಲು ತಟ್ಟುವ ಭಾರತ ತಂಡದ ಕೋಚ್‌ ಅನಿಲ್‌ ಕುಂಬ್ಳೆ ವರ್ತನೆ, ಬಿಸಿಸಿಐ ಸಿಟ್ಟಿಗೆ ಕಾರಣವಾಗಿದೆ. 

ಈ ಬಗ್ಗೆ ಪ್ರತಿಕ್ರಿಯಿಸಿದ್ದ ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ‘‘ಅವರು ಸರಿಯಾದ ದಾರಿಯಲ್ಲಿ ಸಾಗುತ್ತಿದ್ದಾರೆ ಎಂದು ನನಗೆ ಅನಿಸುತ್ತಿಲ್ಲ. ಯಾವುದೇ ವ್ಯಕ್ತಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಅದಕ್ಕೊಂದು ನೀತಿ, ನಿಯಮವಿದೆ. ಅದನ್ನು ಕುಂಬ್ಳೆ ಉಲ್ಲಂಘಿಸುತ್ತಿದ್ದಾರೆ. ತಮಗೆ ಸಂಬಂಧ ಪಡದ ವಿಚಾರಗಳಲ್ಲಿ ಮೂಗು ತೂರಿಸುವುದು ಸರಿಯಲ್ಲ. ಹಾಗೂ ಇದನ್ನು ಬಿಸಿಸಿಐ ಸಹಿಸುವುದಿಲ್ಲ'' ಎಂದಿದ್ದರು. 

ವರದಿ: ಕನ್ನಡಪ್ರಭ

Follow Us:
Download App:
  • android
  • ios