ಕೊಲಂಬೊ(ಜ.10): ಒಂದು ವರ್ಷದ ಹಿಂದಷ್ಟೇ ಲಂಕಾ ತಂಡದ ನಾಯಕತ್ವಕ್ಕೆ ಗುಡ್ ಬೈ ಹೇಳಿದ್ದ ಅನುಭವಿ ಆಲ್ರೌಂಡರ್ ಆ್ಯಂಜಲೋ ಮ್ಯಾಥ್ಯೂಸ್ ಮತ್ತೊಮ್ಮೆ ಲಂಕಾ ತಂಡವನ್ನು ಮುನ್ನಡೆಸಲಿದ್ದಾರೆ.

ಸತತ ಕಳಪೆ ಪ್ರದರ್ಶನದಿಂದ ಕಂಗೆಟ್ಟಿರುವ ಲಂಕಾ ತಂಡಕ್ಕೆ ಅನುಭವಿ ಆಟಗಾರ ಯಶಸ್ವಿಯಾಗಿ ಮುನ್ನಡೆಸಬಹುದು ಎಂಬ ಆಶಾವಾದದೊಂದಿಗೆ ಲಂಕಾ ಕ್ರಿಕೆಟ್ ಮಂಡಳಿ ತೀರ್ಮಾನಿಸಿದಂತಿದೆ. ಹೀಗಾಗಿ ಶ್ರೀಲಂಕಾ ಕ್ರಿಕೆಟ್ ತಂಡದ ನಾಯಕರಾಗಿ ಮತ್ತೊಮ್ಮೆ ಏಂಜೆಲೋ ಮ್ಯಾಥ್ಯೂಸ್ ನೇಮಕಗೊಂಡಿದ್ದಾರೆ. ಏಕದಿನ ಹಾಗೂ ಟಿ20 ತಂಡಗಳ ನಾಯಕತ್ವವನ್ನು ಅವರಿಗೆ ಲಂಕಾ ಕ್ರಿಕೆಟ್ ಮಂಡಳಿ ವಹಿಸಿತು.

6 ತಿಂಗಳ ಹಿಂದೆಯಷ್ಟೇ ಮ್ಯಾಥ್ಯೂಸ್ ಲಂಕಾ ತಂಡದ ನಾಯಕತ್ವ ತ್ಯಜಿಸಿದ್ದರು. ಆದರೆ, ಇದೀಗ ಪುನಃ ಅವರನ್ನೇ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಕೋಚ್ ಕೋರಿಕೆ ಮೇರೆಗೆ ನಾಯಕತ್ವ ಒಪ್ಪಿಕೊಂಡಿದ್ದಾಗಿ ಮ್ಯಾಥ್ಯೂಸ್ ಹೇಳಿದ್ದಾರೆ. ಟೆಸ್ಟ್ ತಂಡದ ನಾಯಕರಾಗಿ ದಿನೇಶ್ ಚಾಂಡಿಮಲ್ ಮುಂದುವರಿಯಲಿದ್ದಾರೆ.

ಇತ್ತೀಚೆಗಷ್ಟೇ ತಿಸಾರ ಪೆರೇರಾ ನಾಯಕತ್ವ ಸ್ಥಾನದಿಂದ ಕೆಳಗಿಳಿದ್ದರು. ತಿಂಗಳಾಂತ್ಯಕ್ಕೆ ಬಾಂಗ್ಲಾದಲ್ಲಿ ನಡೆಯಲಿರುವ ತ್ರಿಕೋನ ಸರಣಿಗೆ 16 ಆಟಗಾರರ ಶ್ರೀಲಂಕಾ ತಂಡವನ್ನು ಇದೇ ವೇಳೆ ಪ್ರಕಟಿಸಲಾಯಿತು.