ಬುಧವಾರ ನಡೆಯುವ ಮುಂದಿನ ಪಂದ್ಯದಲ್ಲಿ ಬ್ರಿಟನ್ನಿನ ಆ್ಯಂಡಿ ಮರ್ರೆ, ಜಪಾನಿನ ಕೀ ನಿಶೀಕೋರಿ ಅವರನ್ನು ಎದುರಿಸಲಿದ್ದಾರೆ.
ಲಂಡನ್(ನ.15): ವಿಶ್ವದ ನಂ.1 ಆಟಗಾರ ಬ್ರಿಟನ್ನಿನ ಆ್ಯಂಡಿ ಮರ್ರೆ ಎಟಿಪಿ ವರ್ಲ್ಡ್ ಟೂರ್ ಫೈನಲ್ಸ್‌ನ ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಮಹತ್ವದ ಗೆಲುವು ಸಾಧಿಸಿದ್ದಾರೆ. ಕ್ರೋಯೇಷಿಯಾದ ಮರಿನ್ ಸಿಲಿಕ್ ಎದುರು 6-3, 6-2 ಸೆಟ್‌ಗಳಿಂದ ಮರ್ರೆ ಜಯ ಸಾಧಿಸಿದ್ದಾರೆ.
ಸೋಮವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಮರ್ರೆ, ಸಿಲಿಕ್ ಎದುರು ಸುಲಭ ಗೆಲುವು ಪಡೆದರು. ಈ ಜಯದೊಂದಿಗೆ ಮರ್ರೆ (11,110) ಅಂಕಗಳೊಂದಿಗೆ ಅಗ್ರ ಸ್ಥಾನ ಕಾಯ್ದುಕೊಂಡಿದ್ದರೆ, ಸರ್ಬಿಯಾದ ನೊವಾಕ್ ಜೊಕೊವಿಚ್ (10,980)ಅಂಕಗಳಿಂದ ಎರಡನೇ ಸ್ಥಾನ ಪಡೆದಿದ್ದಾರೆ. ಬುಧವಾರ ನಡೆಯುವ ಮುಂದಿನ ಪಂದ್ಯದಲ್ಲಿ ಬ್ರಿಟನ್ನಿನ ಆ್ಯಂಡಿ ಮರ್ರೆ, ಜಪಾನಿನ ಕೀ ನಿಶೀಕೋರಿ ಅವರನ್ನು ಎದುರಿಸಲಿದ್ದಾರೆ.
ನಿಶೀಕೋರಿಗೆ ಜಯ:
ಮತ್ತೊಂದು ಪಂದ್ಯದಲ್ಲಿ ಜಪಾನಿನ ಸ್ಟಾರ್ ಟೆನಿಸಿಗ ಕೀ ನಿಶೀಕೋರಿ, ಇಲ್ಲಿನ ಒ2 ಅರೇನಾದಲ್ಲಿ ನಡೆದ ಪಂದ್ಯದಲ್ಲಿ 6-2, 6-3 ಸೆಟ್‌ಗಳಿಂದ ಸ್ವಿಟ್ಜರ್‌ಲೆಂಡಿನ ಪ್ರಭಾವಿ ಆಟಗಾರ ಸ್ಟಾನಿಸ್ಲಾಸ್ ವಾವ್ರಿಂಕಾ ಅವರ ಎದುರು ಗೆಲುವು ಸಾಧಿಸಿದ್ದಾರೆ.
ಈ ಹಿಂದೆ ನಡೆದಿದ್ದ ಯುಎಸ್ ಓಪನ್ ಟೆನಿಸ್ ಟೂರ್ನಿಯ ಸೆಮಿಫೈನಲ್‌ನಲ್ಲಿ ವಾವ್ರಿಂಕಾ ಎದುರು ಸೋಲು ಕಂಡಿದ್ದ ನಿಶೀಕೋರಿ, ಈ ಬಾರಿಯ ಎಟಿಪಿ ಟೂರ್ ಫೈನಲ್ಸ್‌ನಲ್ಲಿ ವಾವ್ರಿಂಕಾ ಅವರನ್ನು ಮಣಿಸಿ ಸೇಡು ತೀರಿಸಿಕೊಂಡಿದ್ದಾರೆ.
