ಅಗ್ರ ಶ್ರೇಯಾಂಕಿತ ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಚ್, ಕ್ವಾರ್ಟರ್‌ ಫೈನಲ್ ಪಂದ್ಯದಲ್ಲಿ ಕ್ರೊವೇಶಿಯಾದ ಮರಿನ್ ಸಿಲಿಕ್ ವಿರುದ್ಧ ಪರಾಭವ ಹೊಂದಿದ್ದರು. ಹೀಗಾಗಿ ‌ಮರ್ರೆ ಈ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದರೆ ನಂ.1 ಶ್ರೇಯಾಂಕಕ್ಕೆ ಏರಲಿದ್ದಾರೆ.

ಪ್ಯಾರಿಸ್(ನ.05): ಬ್ರಿಟನ್‌ನ ಸ್ಟಾರ್ ಆಟಗಾರ ಆ್ಯಂಡಿ ಮರ್ರೆ, ಪ್ಯಾರಿಸ್ ಮಾಸ್ಟರ್ಸ್‌ ಟೆನಿಸ್ ಟೂರ್ನಿಯಲ್ಲಿ ಒಂದು ಗೆಲುವು ಸಾಧಿಸಿದರೆ, ಮೊದಲ ಬಾರಿಗೆ ವಿಶ್ವದ ನಂ.1 ಸ್ಥಾನ ಪಡೆಯಲಿದ್ದಾರೆ.

ಅಗ್ರ ಶ್ರೇಯಾಂಕಿತ ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಚ್, ಕ್ವಾರ್ಟರ್‌ ಫೈನಲ್ ಪಂದ್ಯದಲ್ಲಿ ಕ್ರೊವೇಶಿಯಾದ ಮರಿನ್ ಸಿಲಿಕ್ ವಿರುದ್ಧ ಪರಾಭವ ಹೊಂದಿದ್ದರು. ಹೀಗಾಗಿ ‌ಮರ್ರೆ ಈ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದರೆ ನಂ.1 ಶ್ರೇಯಾಂಕಕ್ಕೆ ಏರಲಿದ್ದಾರೆ.

ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ ಫೈನಲ್ ಪಂದ್ಯದಲ್ಲಿ ಮರ್ರೆ 7-6(11-9), 7-5 ಸೆಟ್‌ಗಳಿಂದ ಜೆಕ್ ಗಣರಾಜ್ಯದ ಥಾಮಸ್ ಬೆರ್ಡಿಕ್ ಎದುರು ಗೆಲುವು ಸಾಧಿಸಿ ಸೆಮಿಫೈನಲ್ ಹಂತ ಪ್ರವೇಶಿಸಿದರು.

ಉಪಾಂತ್ಯದಲ್ಲಿ ಮರ್ರೆ ಕೆನಡಾದ ಮಿಲೊಸ್ ರೊನಿಕ್ ಎದುರು ಸೆಣಸಲಿದ್ದಾರೆ.