ಟೆನಿಸ್: ವಿಂಬಲ್ಡನ್ ಆಡಲು ಮರ್ರೆ ರೆಡಿ

Andy Murray makes admission ahead of comeback at Queen
Highlights

ಸೊಂಟದ ನೋವಿನಿಂದ ಚೇತರಿಸಿಕೊಂಡಿರುವ 31 ವರ್ಷದ ಮರ್ರೆ, 15 ದಿನಗಳಿಂದ ಅಭ್ಯಾಸ ಆರಂಭಿಸಿದ್ದು ಕೊನೆ ಹಂತದ ತಯಾರಿಯಲ್ಲಿದ್ದಾರೆ. 

ಲಂಡನ್(ಜೂ.17]: ವಿಶ್ವದ ಮಾಜಿ ನಂ.1 ಟೆನಿಸಿಗ, ಬ್ರಿಟನ್‌ನ ಆ್ಯಂಡಿ ಮರ್ರೆ, ವಿಂಬಲ್ಡನ್ ಗ್ರ್ಯಾಂಡ್‌ಸ್ಲಾಂ ತಯಾರಿಗಾಗಿ ನಡೆಯಲಿರುವ ಕ್ವೀನ್ಸ್ ಎಟಿಪಿ ಟೂರ್ನಿಯಿಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಶನಿವಾರ ಆಯೋಜಕರು ತಿಳಿಸಿದ್ದಾರೆ. 

ಸೊಂಟದ ನೋವಿನಿಂದ ಚೇತರಿಸಿಕೊಂಡಿರುವ 31 ವರ್ಷದ ಮರ್ರೆ, 15 ದಿನಗಳಿಂದ ಅಭ್ಯಾಸ ಆರಂಭಿಸಿದ್ದು ಕೊನೆ ಹಂತದ ತಯಾರಿಯಲ್ಲಿದ್ದಾರೆ. ಆ್ಯಂಡಿ ಮರ್ರೆ ತಾವು ಕ್ವೀನ್ಸ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರವುದನ್ನು ಖಚಿತಪಡಿಸಿದ್ದಾರೆ ಎಂದು ಟೆನಿಸ್ ಸಂಸ್ಥೆ ತನ್ನ ಟ್ವೀಟ್ ಮಾಡಿದ್ದರು.

ಮೂರು ಗ್ರಾಂಡ್’ಸ್ಲಾಂ ಪ್ರಶಸ್ತಿ ಗೆದ್ದಿರುವ ಮರ್ರೆ ಇದೀಗ ವಿಶ್ವದ 157ನೇ ಶ್ರೇಯಾಂಕಕ್ಕೆ ಕುಸಿದಿದ್ದಾರೆ.  ಮತ್ತೆ ನಂ.1 ಸ್ಥಾನಕ್ಕೇರಲು ಬ್ರಿಟನ್ ಆಟಗಾರ ಸಾಕಷ್ಟು ಬೆವರು ಹರಿಸಬೇಕಿದೆ.

loader