Asianet Suvarna News Asianet Suvarna News

ವಿಂಬಲ್ಡನ್ ಕದನ: ಕ್ವಾರ್ಟರ್'ಗೇರಿದ ಮರ್ರೆ

ಇನ್ನು ಮರ್ರೆ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಮೇರಿಕಾದ ಸ್ಯಾಮ್ ಕ್ವೆರ್ರಿಯನ್ನು ಎದುರಿಸಲಿದ್ದಾರೆ.

Andy Murray beats Benoit Paire

ಲಂಡನ್(ಜು.10); ಪುರುಷರ ಸಿಂಗಲ್ಸ್ ಹಾಲಿ ಚಾಂಪಿಯನ್ ಬ್ರಿಟನ್‌'ನ ಆ್ಯಂಡಿ ಮರ್ರೆ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

ಶ್ರೇಯಾಂಕ ರಹಿತ ಆಟಗಾರ ಫ್ರ್ಯಾನ್ಸ್‌'ನ ಬೆನೊಯ್ಟ್ ಪೈರೆ ವಿರುದ್ಧ ವಿಶ್ವ ನಂಬರ್ 1 ಆಟಗಾರ 3-0 ಸೆಟ್‌'ಗಳಲ್ಲಿ ಭರ್ಜರಿ ಗೆಲುವು ಸಾಧಿಸಿದರು.

ಮೊದಲ ಗೇಮ್'ನ್ನು 7-6 ಗೇಮ್‌'ಗಳಲ್ಲಿ ಗೆದ್ದ ಮರ್ರೆ, ಆನಂತರ 6-4, 6-4 ಗೇಮ್‌'ಗಳಲ್ಲಿ ಕ್ರಮವಾಗಿ 2 ಹಾಗೂ 3ನೇ ಸೆಟ್‌'ಗಳನ್ನು ತಮ್ಮದಾಗಿಸಿಕೊಂಡರು.

ಈ ಮೂಲಕ ಮರ್ರೆ ತಮ್ಮ ವೃತ್ತಿಬದುಕಿನಲ್ಲಿ ‌10ನೇ ಬಾರಿಗೆ ವಿಂಬಲ್ಡನ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದರು. ಇನ್ನು ಮರ್ರೆ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಮೇರಿಕಾದ ಸ್ಯಾಮ್ ಕ್ವೆರ್ರಿಯನ್ನು ಎದುರಿಸಲಿದ್ದಾರೆ.

Follow Us:
Download App:
  • android
  • ios