ಸತತ 28 ಪಂದ್ಯಗಳನ್ನು ಗೆದ್ದು ಬೀಗುತ್ತಿರುವ ಮರ್ರೆ ನಾಗಾಲೋಟಕ್ಕೆ ಜೊಕೊವಿಚ್ ಬ್ರೇಕ್ ಹಾಕುತ್ತಾರ ಎನ್ನುವುದನ್ನು ಕಾದುನೋಡಬೇಕಿದೆ.

ದೋಹಾ(ಜ.07): ನಿರೀಕ್ಷೆಯಂತೆಯೇ ಕತಾರ್ ಓಪನ್ ಟೆನಿಸ್ ಪಂದ್ಯಾವಳಿಯ ಪ್ರಶಸ್ತಿ ಸುತ್ತಿಗೆ ವಿಶ್ವದ ಮೊದಲೆರಡು ಕ್ರಮಾಂಕಿತ ಆಟಗಾರರಾದ ಆ್ಯಂಡಿ ಮರ್ರೆ ಮತ್ತು ನೊವಾಕ್ ಜೊಕೊವಿಚ್ ಧಾವಿಸಿದ್ದು, ಋತುವಿನ ಮೊದಲ ಗ್ರಾಂಡ್‌ಸ್ಲಾಮ್ ಟೂರ್ನಿಯಾದ ಆಸ್ಟ್ರೇಲಿಯಾ ಓಪನ್‌'ಗೆ ಮುಂಚೆಯೇ ಮಹತ್ವದ ಕಾದಾಟಕ್ಕೆ ಅಣಿಯಾಗಿದ್ದಾರೆ.

ವಿಶ್ವದ 42ನೇ ಶ್ರೇಯಾಂಕಿತ ಫೆರ್ನಾಂಡೊ ವರ್ಡೆಸ್ಕೊ ವಿರುದ್ಧದ ಸೆಮಿಫೈನಲ್‌ನಲ್ಲಿ ಜೊಕೊವಿಚ್ 4-6, 7-6 (9/7) ಮತ್ತು 6-3 ಸೆಟ್‌'ಗಳಿಂದ ಗೆಲುವು ಪಡೆದರೆ, ಮತ್ತೊಂದು ಸೆಮಿಫೈನಲ್‌ನಲ್ಲಿ ಜೆಕ್ ಆಟಗಾರ ಥಾಮಸ್ ಬೆರ್ಡಿಚ್ ಅವರನ್ನು 6-3, 6-3 ನೇರ ಸೆಟ್‌'ಗಳಲ್ಲಿ ಮರ್ರೆ ಮಣಿಸಿ ಪ್ರಶಸ್ತಿ ಸುತ್ತಿಗೆ ಧಾವಿಸಿದರು.

ಮರ್ರೆ 2008 ಹಾಗೂ 2009ರಲ್ಲಿ ಪ್ರತಿಷ್ಟಿತ ಕತಾರ್ ಓಪನ್ ಪ್ರಶಸ್ತಿಯನ್ನು ಗೆದ್ದು ಮೂರನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದಾರೆ. ಸತತ 28 ಪಂದ್ಯಗಳನ್ನು ಗೆದ್ದು ಬೀಗುತ್ತಿರುವ ಮರ್ರೆ ನಾಗಾಲೋಟಕ್ಕೆ ಜೊಕೊವಿಚ್ ಬ್ರೇಕ್ ಹಾಕುತ್ತಾರ ಎನ್ನುವುದನ್ನು ಕಾದುನೋಡಬೇಕಿದೆ.

ಭಾನುವಾರ ನಡೆಯಲಿರುವ ಫೈನಲ್‌'ನಲ್ಲಿ ಇಬ್ಬರೂ ಸೆಣಸಲಿದ್ದಾರೆ.