ದೋಣಿಗಳ ರೇಸ್’ಗೆ ಐಪಿಎಲ್ ಟಚ್ ಕೊಟ್ಟ ಕೇರಳ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 1, Aug 2018, 2:02 PM IST
An IPL touch to boat races in Kerala State
Highlights

ಚಾಂಪಿಯನ್ಸ್ ಬೋಟ್ ಲೀಗ್(ಸಿಬಿಎಲ್) ಎಂದು ಸ್ಪರ್ಧೆಗೆ ಮರು ನಾಮಕರಣ ಮಾಡಲಾಗಿದ್ದು, ಲೀಗ್ ಮಾದರಿಯಲ್ಲಿ 13 ರೇಸ್‌ಗಳನ್ನು ನಡೆಸಲಾಗುತ್ತದೆ ಎಂದು ತಿಳಿಸಿದೆ.

ತಿರುವನಂತಪುರಂ(ಆ.01]: ಕೇರಳದ ಐತಿಹಾಸಿಕ ಪ್ರಸಿದ್ಧ ದೋಣಿ ರೇಸ್‌ಗೆ ಹೊಸ ಅವತಾರ ದೊರೆಯಲಿದೆ. ಈ ವರ್ಷದಿಂದ ಸ್ಪರ್ಧೆಯನ್ನು ಐಪಿಎಲ್ ಮಾದರಿಯಲ್ಲಿ ನಡೆಸಲು ಕೇರಳ ಪ್ರವಾಸೋದ್ಯಮ ಇಲಾಖೆ ನಿರ್ಧರಿಸಿದೆ. 

ಚಾಂಪಿಯನ್ಸ್ ಬೋಟ್ ಲೀಗ್(ಸಿಬಿಎಲ್) ಎಂದು ಸ್ಪರ್ಧೆಗೆ ಮರು ನಾಮಕರಣ ಮಾಡಲಾಗಿದ್ದು, ಲೀಗ್ ಮಾದರಿಯಲ್ಲಿ 13 ರೇಸ್‌ಗಳನ್ನು ನಡೆಸಲಾಗುತ್ತದೆ ಎಂದು ತಿಳಿಸಿದೆ. ಆ.111ರಿಂದ ನ.1ರ ವರೆಗೂ ರಾಜ್ಯದ 13 ಕಡೆ ಸ್ಪರ್ಧೆಯನ್ನು ನಡೆಸಲಾಗುತ್ತದೆ ಎಂದು ಕೇರಳ ಪ್ರವಾಸೋದ್ಯಮ ಖಾತೆ ಸಚಿವ ಸುರೇಂದ್ರನ್ ಹೇಳಿದ್ದಾರೆ. 

ಸಿಬಿಎಲ್ ಗೆಲ್ಲುವ ತಂಡಕ್ಕೆ ₹25 ಲಕ್ಷ ಪ್ರಶಸ್ತಿ ಮೊತ್ತ ನೀಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

loader