ಕರೋಡ್’ಪತಿ ಶೋನಲ್ಲಿ ವಿರುಷ್ಕಾ ಬಗ್ಗೆ ಪ್ರಶ್ನೆ..!

Amitabh Bachchan Q&A on Virat Kohli and Anushka Sharma's wedding could get you on the hot seat
Highlights

ವಿರುಷ್ಕಾ ಮದುವೆ ನಡೆದಿದ್ದು ಯಾವ ದೇಶದಲ್ಲಿ ಎನ್ನುವ ಪ್ರಶ್ನೆಯನ್ನು ವೀಕ್ಷಕರಿಗೆ ಕೇಳಿದ್ದು ಅಭಿಮಾನಿಗಳ ಗಮನ ಸೆಳೆದಿದೆ.

ಮುಂಬೈ[ಜೂ.10]: ‘ವಿರುಷ್ಕಾ’ ಎಂದೇ ಜನಪ್ರಿಯಗೊಂಡಿರುವ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಅವರ ಪತ್ನಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಬಗ್ಗೆ ಹಿಂದಿಯ ಜನಪ್ರಿಯ ಟೀವಿ ಕಾರ್ಯಕ್ರಮ ಕೌನ್ ಬನೇಗಾ ಕರೋಡ್‌ಪತಿಯಲ್ಲೂ ಪ್ರಶ್ನೆ ಕೇಳಲಾಗಿದೆ.

ವಿರುಷ್ಕಾ ಮದುವೆ ನಡೆದಿದ್ದು ಯಾವ ದೇಶದಲ್ಲಿ ಎನ್ನುವ ಪ್ರಶ್ನೆಯನ್ನು ವೀಕ್ಷಕರಿಗೆ ಕೇಳಿದ್ದು ಅಭಿಮಾನಿಗಳ ಗಮನ ಸೆಳೆದಿದೆ. ಕಾರ್ಯಕ್ರಮದ ಮುಖ್ಯ ಸಂಚಿಕೆಗಳು ಸದ್ಯದಲ್ಲೇ ಆರಂಭಗೊಳ್ಳಲಿದ್ದು, ಈಗ ನೋಂದಣಿ ಕಾರ್ಯ ನಡೆಯುತ್ತಿದೆ. 

ಪ್ರತಿ ದಿನ ಒಂದೊಂದು ಪ್ರಶ್ನೆ ಕೇಳಲಾಗುತ್ತಿದ್ದು, ಎಲ್ಲಾ ಪ್ರಶ್ನೆಗಳಿಗೂ ಸರಿಯಾದ ಉತ್ತರ ಕೊಟ್ಟವರನ್ನು ಕಾರ್ಯಕ್ರಮದ ಮುಂದಿನ ಆಯ್ಕೆ ಪ್ರಕ್ರಿಯೆಗೆ ಕರೆಯಲಾಗುತ್ತದೆ ಎನ್ನಲಾಗಿದೆ.
ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಇಟಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು.

loader