ಫಿಫಾ ವಿಶ್ವಕಪ್ 2018: ಬಲಿಷ್ಠ ಕೋಸ್ಟರಿಕಾ ವಿರುದ್ಧ ಸರ್ಬಿಯಾಗೆ ಗೆಲುವಿನ ಸಂಭ್ರಮ

Aleksandar Kolarov's Wonder Strike Helps Serbia Beat Costa Rica 1-0
Highlights

ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ರೋಚಕ ಪಂದ್ಯಗಳ ಜೊತೆಗೆ ಅಚ್ಚರಿ ಫಲಿತಾಂಶಗಳು ಹೊರಬರುತ್ತಿದೆ. ಐಸ್‌ಲೆಂಡ್ ವಿರುದ್ಧ ಅರ್ಜೆಂಟೀನಾ ಶಾಕ್ ಅನುಭವಿಸಿದರೆ, ಇದೀಗ ಸರ್ಬಿಯಾ ವಿರುದ್ಧ ಕೋಸ್ಟರಿಕಾ ಆಘಾತ ಎದುರಿಸಿದೆ. ಕೋಸ್ಟರಿಕಾ ವಿರುದ್ಧದ ರೋಚಕ ಹೋರಾಟದಲ್ಲಿ ಸರ್ಬಿಯಾ ಆಟ ಹೇಗಿತ್ತು? ಇಲ್ಲಿದೆ ವಿವರ
 

ರಷ್ಯಾ(ಜೂ.17): ಫಿಫಾ ವಿಶ್ವಕಪ್ ಟೂರ್ನಿಯ ಗ್ರೂಪ್ ಸ್ಟೇಜ್ ಪಂದ್ಯದಲ್ಲಿ ಕೋಸ್ಟರಿಕಾ ತಂಡಕ್ಕೆ ಆಘಾತವಾಗಿದೆ. ಸರ್ಬಿಯಾ ವಿರುದ್ಧ ಗೆಲುವಿನ ವಿಶ್ವಾಸದಲ್ಲಿದ್ದ ಕೋಸ್ಟರಿಕಾ ಸೋಲಿನ ಕಹಿ ಅನುಭವಿಸಿದೆ. ರೋಚಕ ಪಂದ್ಯದಲ್ಲಿ ಸರ್ಬಿಯಾ 1-0 ಗೋಲಿನ ಅಂತರದಲ್ಲಿ ಪಂದ್ಯ ಗೆದ್ದು ಸಂಭ್ರಮಿಸಿದೆ.

ಮೊದಲಾರ್ಧದಲ್ಲಿ ಉಭಯ ತಂಡಗಳು ಹೋರಾಟ ನಡೆಸಿದರೂ ಗೋಲು ದಾಖಲಾಗಲಿಲ್ಲ. ಉಭಯ ತಂಡಗಳು ಹಲವು ಪ್ರಯತ್ನಗಳನ್ನ ಮಾಡಿತು. ಆದರೆ ಯಶಸ್ಸು ಸಿಗಲಿಲ್ಲ. ಹೀಗಾಗಿ ಪಂದ್ಯದ ಫಸ್ಟ್ ಹಾಫ್ ಗೋಲಿಲ್ಲದೆ ಅಂತ್ಯವಾಯಿತು.

ದ್ವಿತೀಯಾರ್ಧದಲ್ಲಿ ಆಕ್ರಮಣಕಾರಿ ಆಟಕ್ಕೆ ಮುಂದಾದ ಸರ್ಬಿಯಾ 56ನೇ ನಿಮಿಷದಲ್ಲಿ ಗೋಲು ಸಿಡಿಸಿತು. ಅಲೆಕ್ಸಾಂಡರ್ ಕೊಲೆರೊವ್ ಸಿಡಿಸಿದ ಗೋಲಿನಿಂದ ಸರ್ಬಿಯಾ 1-0 ಮುನ್ನಡೆ ಸಾಧಿಸಿತು. 

ಹಿನ್ನಡೆ ಅನುಭವಿಸಿದ ಕೋಸ್ಟರಿಕಾ ಗೆಲುವಿಗಾಗಿ ಕಠಿಣ ಹೋರಾಟ ನೀಡಿತು. ಆದರೆ ಮೊದಲ ಗೋಲಿನ ಬಳಿಕ ಸರ್ಬಿಯಾ ಡಿಫೆನ್ಸ್ ಆಟಕ್ಕೆ ಹೆಚ್ಚು ಒತ್ತು ನೀಡಿತು. ಹೀಗಾಗಿ ಸರ್ಬಿಯಾ ಗೆಲುವಿನ ನಗೆ ಬೀರಿತು. 

 

loader