ಸತತ ಟೆಸ್ಟ್ ಪಂದ್ಯ ಆಡೋ ಮೂಲಕ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಅಲಿಸ್ಟೈರ್ ಕುಕ್ ವಿಶ್ವದಾಖಲೆ ಬರೆದಿದ್ದಾರೆ. ಸತತವಾಗಿ 154 ಟೆಸ್ಟ್ ಪಂದ್ಯ ಆಡಿದ ಕುಕ್, ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಅಲನ್ ಬಾರ್ಡರ್ ದಾಖಲೆ ಮುರಿದಿದ್ದಾರೆ.
ಇಂಗ್ಲೆಂಡ್(ಜೂನ್.1) ಇಂಗ್ಲೆಂಡ್ ಹಾಗು ಪಾಕಿಸ್ತಾನ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಅಲಿಸ್ಟೈರ್ ಕುಕ್ ವಿಶ್ವ ದಾಖಲೆ ಬರೆದಿದ್ದಾರೆ. ಹೆಡ್ಲಿಂಗೆ ಮೈದಾನದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯ ಆಡೋ ಮೂಲಕ ಅಲಿಸ್ಟರ್ ಕುಕ್ ಸತತವಾಗಿ 154 ಟೆಸ್ಟ್ ಪಂದ್ಯ ಆಡಿ, ಬಾರ್ಡರ್ ದಾಖಲೆ ಮುರಿದಿದ್ದಾರೆ.
ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಅಲನ್ ಬಾರ್ಡರ್ ಮಾರ್ಚ್ 10, 1979 ರಿಂದ ಮಾರ್ಚ್ 25, 1994ರ ವರೆಗೆ ಒಂದೂ ಟೆಸ್ಟ್ ಪಂದ್ಯವನ್ನ ಮಿಸ್ ಮಾಡದೇ 153 ಪಂದ್ಯ ಆಡಿದ್ದರು. ಇದೀಗ ಅಲಿಸ್ಟೈರ್ ಕುಕ್, ಮಾರ್ಚ್ 11, 2006ರಿಂದ ಇಲ್ಲೀವರೆಗೆ ಒಂದೂ ಟೆಸ್ಟ್ ಪಂದ್ಯ ಮಿಸ್ ಮಾಡದ ಕುಕ್ ಹೊಸ ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ ಸತತವಾಗಿ ಗರಿಷ್ಠ ಟೆಸ್ಟ್ ಪಂದ್ಯ ಆಡಿದ ಕ್ರಿಕೆಟಿಗ ಅನ್ನೋ ಹೆಗ್ಗಳಿಕೆಗೆ ಅಲಿಸ್ಟೈರ್ ಕುಕ್ ಪಾತ್ರರಾಗಿದ್ದಾರೆ.
ಸತತವಾಗಿ ಗರಿಷ್ಠ ಟೆಸ್ಟ್ ಪಂದ್ಯವಾಡಿದ ಐವರು ಸಾಧಕರು:
| ಕ್ರಿಕೆಟಗ | ತಂಡ | ಸತತ ಟೆಸ್ಟ್ | ಓಟ್ಟು ಟೆಸ್ಟ್ |
| ಅಲಿಸ್ಟರ್ ಕುಕ್ | ಇಂಗ್ಲೆಂಡ್ | 154 | 156 |
| ಅಲನ್ ಬಾರ್ಡರ್ | ಆಸ್ಟ್ರೇಲಿಯಾ | 153 | 156 |
| ಮಾರ್ಕ್ ವ್ಹಾ | ಆಸ್ಟ್ರೇಲಿಯಾ | 107 | 128 |
| ಸುನಿಲ್ ಗವಾಸ್ಕರ್ | ಭಾರತ | 106 | 125 |
| ಬ್ರೆಂಡನ್ ಮೆಕ್ಕಲಮ್ | ನ್ಯೂಜಿಲೆಂಡ್ | 101 | 101 |
