ಫಿಫಾ ವಿಶ್ವಕಪ್ 2018 : ಅಂತಿಮ ನಿಮಿಷದಲ್ಲಿ ಸೌದಿಗೆ ಒಲಿದ ಗೆಲುವು
ಇನೇನು ಪಂದ್ಯ ಡ್ರಾನಲ್ಲಿ ಅಂತ್ಯಗೊಳ್ಳಬೇಕು ಅನ್ನುವಷ್ಟರಲ್ಲೇ ಬಿರುಗಾಳಿಯಂತೆ ಬಂದ ಸೌದಿ ಅರೇಬಿಯಾ ಅಲ್ ದವ್ಸಾರಿ ಮಿಂಚಿನ ಗೋಲು ಸಿಡಿಸಿ ಪಂದ್ಯಕ್ಕೆ ರೋಚಕ ತಿರುವು ನೀಡಿದರು. ಈ ಮಹತ್ವದ ಪಂದ್ಯದ ಹೈಲೈಟ್ಸ್ ಇಲ್ಲಿದೆ.
ರಷ್ಯಾ(ಜೂ.25): ಈಜಿಪ್ಟ್ ವಿರುದ್ಧ ಫಿಫಾ ವಿಶ್ವಕಪ್ ಪಂದ್ಯದಲ್ಲಿ ಸೌದಿ ಅರೇಬಿಯಾ ರೋಚಕ ಗೆಲುವು ದಾಖಲಿಸಿದೆ. 2-1 ಅಂತರದಲ್ಲಿ ಗೆಲುವು ಸಾಧಿಸಿದ ಸೌದಿ ಅರೇಬಿಯಾ ಮೈದಾನದಲ್ಲೇ ಸಂಭ್ರಮಾಚರಣೆ ನಡೆಸಿತು.
ಫಸ್ಟ್ ಹಾಫ್‌ನಲ್ಲಿ ರೋಚಕ ಹೋರಾಟ ಅಭಿಮಾನಿಗಳ ಎದೆಬಡಿತ ಹೆಚ್ಚಿಸಿತು. ಆರಂಭದಲ್ಲೇ ಆಕ್ರಮಣಕಾರಿ ಆಟವಾಡಿದ ಈಜಿಪ್ಟ್ 22ನೇ ನಿಮಿಷದಲ್ಲಿ ಮೊದಲ ಗೋಲು ಸಿಡಿಸಿತು. ಈಜಿಪ್ಟ್ ತಂಡದ ಸ್ಟಾರ್ ಪ್ಲೇಯರ್ ಮೊಹಮ್ಮದ ಸಲಾಹ್ ಗೋಲು ಬಾರಿಸಿ ಮುನ್ನಡೆ ತಂದುಕೊಟ್ಟರು.
ಮೊದಲಾರ್ಧದ ಅಂತ್ಯದಲ್ಲಿ ಸೌದಿ ಅರೇಬಿಯಾ ತಿರುಗೇಟು ನೀಡಿತು. ಪೆನಾಲ್ಟಿ ಅವಕಾಶದ ಮೂಲಕ ಸಲ್ಮಾನ್ ಅಲ್ ಫರಾಜ್ ಗೋಲು ಬಾರಿಸೋ ಮೂಲಕ 1-1 ಅಂತರದಲ್ಲಿ ಸಮಭಲ ಮಾಡಿದರು.
ದ್ವಿತಿಯಾರ್ಧದಲ್ಲಿ ಸೌದಿ ಅರೇಬಿಯಾ ಪಂದ್ಯದ ಮೇಲೆ ಹಿಡಿತ ಸಾಧಿಸಿತು. 65 ಪ್ರತಿಶತ ಬಾಲ್ ಪೊಸಿಶನ್ ಇಟ್ಟುಕೊಂಡ ಸೌದಿ ಗೆಲುವಿಗಾಗಿ ಹೋರಾಟ ನಡಡೆಸಿತು. ಆದರೆ ಗೋಲು ಮಾತ್ರ ದಾಖಲಾಗಲಿಲ್ಲ. ಇನ್ನೇನು ಪಂದ್ಯ ಡ್ರಾನಲ್ಲಿ ಅಂತ್ಯಗೊಳ್ಳಬೇಕು ಅನ್ನುವಷ್ಚರಲ್ಲೇ ಸೌದಿ ಮ್ಯಾಜಿಕ್ ಮಾಡಿತು. 90+5ನೇ ನಿಮಿಷದಲ್ಲಿ ಸಲೀಮ್ ಅಲ್ ದವ್ಸಾರಿ ಗೋಲು ಸಿಡಿಸಿದ ಗೋಲಿನಿಂದ ಸೌದಿ ಅರೇಬಿಯಾ 2-1 ಅಂತರದಲ್ಲಿ ಗೆಲುವು ಸಾಧಿಸಿತು.