ಕೊಲ್ಹಾಪುರ ಪೊಲೀಸರು ಸಿಆರ್‌'ಪಿಸಿ 41/1ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ರಹಾನೆ ತಂದೆಯನ್ನು ಬಂಧಿಸಿದ್ದಾರೆಂದು ವರದಿಯಾಗಿದೆ.
ಮುಂಬೈ(ಡಿ.16): ರಸ್ತೆ ಅಪಘಾತದ ಕೇಸ್'ನಲ್ಲಿ ಭಾರತ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ ಅವರ ತಂದೆ ಮಧುಕರ್ ರಾವ್ ರಹಾನೆ ಬಂಧನಕ್ಕೊಳಗಾಗಿದ್ದಾರೆ.
ಗುರುವಾರ ಕೊಲ್ಹಾಪುರಕ್ಕೆ ಪ್ರಯಾಣಿಸುತ್ತಿದ್ದ ವೇಳೆ, ರಹಾನೆ ತಂದೆ ಚಲಾಯಿಸುತ್ತಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ 67 ವರ್ಷದ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಸಂಭವಿಸಿದೆ. ಮೃತರನ್ನು ಸಾವಿತ್ರಿ ನಗರದ ಆಶಾಬಾಯಿ ಕಾಂಬ್ಳೆ ಎಂದು ಗುರುತಿಸಲಾಗಿದೆ.
ರಸ್ತೆ ದಾಟುವಾಗ ಆಶಾಬಾಯಿ ಗೊಂದಲಕ್ಕೆ ಒಳಗಾಗಿ, ಮಧುಕರ್ ಅವರ ಕಾರಿಗೆ ಅಡ್ಡಬಂದಿದ್ದಾರೆ. ನಿಯಂತ್ರಣ ತಪ್ಪಿದ ಕಾರಣ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಳು ಮಹಿಳೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಮೃತರಾದರು. ಕೊಲ್ಹಾಪುರ ಪೊಲೀಸರು ಸಿಆರ್'ಪಿಸಿ 41/1ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ರಹಾನೆ ತಂದೆಯನ್ನು ಬಂಧಿಸಿದ್ದಾರೆಂದು ವರದಿಯಾಗಿದೆ.
