ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಟೀಂ ಇಂಡಿಯಾ 2-1 ಅಂತರಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಸರಣಿ ಗೆದ್ದುಕೊಂಡಿದೆ.
ಧರ್ಮಶಾಲಾ(ಮಾ.29): ಪಂದ್ಯ ಸೋತ ಬಳಿಕ ಆಸ್ಪ್ರೇಲಿಯಾ ನಾಯಕ ತಮ್ಮ ಐಪಿಎಲ್ ಸಹ ಆಟಗಾರ ಹಾಗೂ ಧರ್ಮಶಾಲಾ ಪಂದ್ಯದಲ್ಲಿ ಭಾರತ ತಂಡವನ್ನು ಮುನ್ನಡೆಸಿದ ಅಜಿಂಕ್ಯ ರಹಾನೆಯನ್ನು, ‘‘ನಾವು ನಿಮ್ಮ ಡ್ರೆಸ್ಸಿಂಗ್ ಕೊಠಡಿಗೆ ಬರುತ್ತೇವೆ. ಎರಡೂ ತಂಡದ ಆಟಗಾರರು ಒಟ್ಟಿಗೆ ಬಿಯರ್ ಸೇವಿಸೋಣವೆ'' ಎಂದು ಕೇಳಿದ್ದಾಗಿ ಸ್ವತಃ ಸ್ಮಿತ್ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ಸರಣಿ ಮುಕ್ತಾಯದ ಬಳಿಕ ಎದುರಾಳಿ ತಂಡದೊಂದಿಗೆ ಬಿಯರ್ ಸೇವಿಸಿ ಎಲ್ಲಾ ಮನಸ್ತಾಪಗಳಿಗೂ ಪೂರ್ಣ ವಿರಾಮವಿಡುವುದು ಆಸೀಸ್ ಕ್ರಿಕೆಟ್ ತಂಡದ ಸಂಪ್ರದಾಯ.
ಸ್ಮಿತ್ ಪ್ರಸ್ತಾಪಕ್ಕೆ ರಹಾನೆ ‘‘ತಂಡವನ್ನು ಕೇಳಿ ಹೇಳುತ್ತೇನೆ'' ಎಂದರಂತೆ!
ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಟೀಂ ಇಂಡಿಯಾ 2-1 ಅಂತರಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಸರಣಿ ಗೆದ್ದುಕೊಂಡಿದೆ.
