ಇಂಗ್ಲೆಂಡ್ ವಿರುದ್ಧದ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಶಿಖರ್ ಧವನ್ ಹಾಗೂ ಹರ್ಭಜನ್ ಸಿಂಗ್ ಭಾಂಗ್ರಾ ನೃತ್ಯ ಇದೀಗ ವೈರಲ್ ಆಗಿದೆ. ಧವನ್ ಅದ್ಬುತ ಹೆಜ್ಜೆ ಹಾಕಿ ಗಮನಸೆಳೆದರೆ, ಭಜ್ಜಿ, ವೀಕ್ಷಕ ವಿವರಣೆಗಾರ ಲಾಯ್ಡ್‌ಗೆ ಭಾಂಗ್ರಾ ನೃತ್ಯ ಹೇಳಿಕೊಟ್ಟರು.
ಲಂಡನ್(ಸೆ.09): ಭಾರತ-ಇಂಗ್ಲೆಂಡ್ ನಡುವಿನ ಅಂತಿಮ ಟೆಸ್ಟ್‌ನಲ್ಲಿ ಮೇಲುಗೈ ಸಾಧಿಸಲು ಹೋರಾಡುತ್ತಿದೆ. ಮೊದಲ ಟೀಂ ಇಂಡಿಯಾ ಯಶಸ್ಸು ಸಾಧಿಸಿದರೆ, ದ್ವಿತೀಯ ದಿನ ಇಂಗ್ಲೆಂಡ್ ಬೌಲರ್‌ಗಳು ಪ್ರರಾಕ್ರಮ ಮೆರೆದಿದ್ದಾರೆ.
ಟೀಂ ಇಂಡಿಯಾದ ದಿಟ್ಟ ಹೋರಾಟದ ನಡುವೆ ಬೌಂಡರಿ ಲೈನ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಶಿಖರ್ ಧವನ್ ಪಂಜಾಬಿ ಭಾಂಗ್ರ ನೃತ್ಯ ಮಾಡಿ ಗಮನಸೆಳೆದಿದ್ದಾರೆ. ಅಭಿಮಾನಿಗಳಿಗಾಗಿ ಧವನ್ ಭಾಂಗ್ರಾ ನೃತ್ಯ ಮಾಡಿ ಮನರಂಜನೆ ನೀಡಿದರು.
ಶಿಖರ್ ಧವನ್ ಮೈದಾನದಲ್ಲಿ ಭಾಂಗ್ರ ನೃತ್ಯ ಮಾಡಿದರೆ, ಕಾಮೆಂಟ್ರಿಯಲ್ಲಿ ಟೀಂ ಇಂಡಿಯಾ ಕ್ರಿಕೆಟಿಗ ಹರ್ಭಜನ್ ಸಿಂಗ್ ಭಾಂಗ್ರಾ ನೃತ್ಯ ಮಾಡಿದ್ದಾರೆ. ಇಷ್ಟೇ ಅಲ್ಲ, ಸಹ ವೀಕ್ಷಕ ವಿವರಣೆಕಾರ ಡೇವಿಡ್ ಲಾಯ್ಡ್‌ಗೆ ‘ಭಾಂಗ್ರಾ’ ನೃತ್ಯ ಹೇಳಿಕೊಟ್ಟಿದ್ದು, ಆ
ಫೋಟೊ ಮತ್ತು ವಿಡಿಯೋ ವೈರಲ್ ಆಗಿದೆ.
