ಅಫ್ರಿದಿ ಅವರನ್ನು ಪರೀಕ್ಷಿಸಿದ ವೈದ್ಯರು 10 ದಿನಗಳ ಕಾಲ ವಿಶ್ರಾಂತಿಗೆ ಸಲಹೆ ನೀಡಿದ್ದಾರೆ.

ಕರಾಚಿ(ಮಾ.05): ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌'ಗೆ ನಿವೃತ್ತಿ ಘೋಷಿಸಿದ ಪಾಕಿಸ್ತಾನದ ಆಲ್ರೌಂಡರ್‌ ಆಟಗಾರ ಶಾಹೀದ್‌ ಅಫ್ರಿದಿ, ಪಾಕಿಸ್ತಾನ ಸೂಪರ್‌ ಲೀಗ್‌ (ಪಿಎಸ್‌ಎಲ್‌) ಫೈನಲ್‌'ಗೆ ಗಾಯದ ನಿಮಿತ್ತ ಅಲಭ್ಯವಾಗಿದ್ದಾರೆ.

ಕಳೆದ ಶುಕ್ರವಾರ ದುಬೈನಲ್ಲಿ ನಡೆದಿದ್ದ ಕರಾಚಿ ಕಿಂಗ್ಸ್‌ ವಿರುದ್ಧದ ಲೀಗ್‌ ಎಲಿಮೇನೇಟರ್‌ ಪಂದ್ಯದಲ್ಲಿ ಕ್ಷೇತ್ರ ರಕ್ಷಣೆ ಮಾಡುವ ವೇಳೆ ಅಫ್ರಿದಿ ಗಾಯಗೊಂಡಿದ್ದರು.

ಗಂಭೀರ ಪ್ರಮಾಣದ ಗಾಯವಾಗಿರುವುದರಿಂದ ಅಫ್ರಿದಿ ಅವರ ಕೈಗೆ 12 ಹೊಲಿಗೆಗಳನ್ನು ಹಾಕಲಾಗಿದೆ. ಅಫ್ರಿದಿ ಅವರನ್ನು ಪರೀಕ್ಷಿಸಿದ ವೈದ್ಯರು 10 ದಿನಗಳ ಕಾಲ ವಿಶ್ರಾಂತಿಗೆ ಸಲಹೆ ನೀಡಿದ್ದಾರೆ.

ಕ್ವೆಟ್ಟಾಗ್ಲಾಡಿಯೇಟ​ರ್ಸ್ ವಿರುದ್ಧ ಇಂದು (ಮಾ.5) ನಡೆಯಲಿರುವ ಫೈನಲ್‌'ನಲ್ಲಿ ಪೇಶಾವರ ಜಲ್ಮಿ ತಂಡವನ್ನು ವಿಂಡೀಸ್‌ ಕ್ರಿಕೆಟಿಗ ಡರೇನ್‌ ಸಾಮಿ ಮುನ್ನಡೆಸಲಿದ್ದಾರೆ.