ಜೂನ್‌'ನಲ್ಲಿ ಐಸಿಸಿ ಸಭೆ ವೇಳೆ ಆಫ್ಘಾನಿಸ್ತಾನ ಹಾಗೂ ಐರ್ಲೆಂಡ್ ತಂಡಗಳು 11 ಹಾಗೂ 12ನೇ ಟೆಸ್ಟ್ ಆಡುವ ರಾಷ್ಟ್ರಗಳಾಗಿ ಮಾನ್ಯತೆ ಪಡೆದುಕೊಂಡಿದ್ದವು.

ನವದೆಹಲಿ(ಡಿ.12): ಇದೇ ವರ್ಷ ಜೂನ್‌'ನಲ್ಲಿ ಟೆಸ್ಟ್ ಮಾನ್ಯತೆ ಪಡೆದ ಆಫ್ಘಾನಿಸ್ತಾನ ಕ್ರಿಕೆಟ್ ತಂಡ ತನ್ನ ಚೊಚ್ಚಲ ಪಂದ್ಯವನ್ನು ಭಾರತ ವಿರುದ್ಧ 2019-20ರ ಋತುವಿನಲ್ಲಿ ಭಾರತದಲ್ಲಿ ಆಡಲಿದೆ.

ಬಿಸಿಸಿಐ ತನ್ನ ವಿಶೇಷ ಸಾಮಾನ್ಯ ಸಭೆಯಲ್ಲಿ ಈ ವಿಷಯ ತಿಳಿಸಿತು. ‘ಆಫ್ಘಾನಿಸ್ತಾನ 2019ರಲ್ಲಿ ಆಸ್ಟ್ರೇಲಿಯಾ ವಿರುದ್ಧ ತನ್ನ ಚೊಚ್ಚಲ ಟೆಸ್ಟ್ ಆಡಬೇಕಿತ್ತು. ಆದರೆ ಭಾರತ-ಆಫ್ಘಾನಿಸ್ತಾನದ ನಡುವಿನ ಬಾಂಧವ್ಯದ ಸಂಕೇತವಾಗಿ ತಂಡಕ್ಕೆ ಮೊದಲು ಆತಿಥ್ಯ ನೀಡಲು ನಾವು ನಿರ್ಧರಿಸಿದೆವು’ ಎಂದು ಬಿಸಿಸಿಐ ಹಂಗಾಮಿ ಕಾರ್ಯದರ್ಶಿ ಅಮಿತಾಭ್ ಚೌಧರಿ ತಿಳಿಸಿದರು.

Scroll to load tweet…
Scroll to load tweet…

ಜೂನ್‌'ನಲ್ಲಿ ಐಸಿಸಿ ಸಭೆ ವೇಳೆ ಆಫ್ಘಾನಿಸ್ತಾನ ಹಾಗೂ ಐರ್ಲೆಂಡ್ ತಂಡಗಳು 11 ಹಾಗೂ 12ನೇ ಟೆಸ್ಟ್ ಆಡುವ ರಾಷ್ಟ್ರಗಳಾಗಿ ಮಾನ್ಯತೆ ಪಡೆದುಕೊಂಡಿದ್ದವು.