Asianet Suvarna News Asianet Suvarna News

ಅಫ್ಘಾನಿಸ್ತಾನ ಕ್ರಿಕೆಟಿಗರ ನೆಚ್ಚಿನ ತಿನಿಸು ಯಾವುದು ಗೊತ್ತಾ?

ಅಫ್ಘಾನಿಸ್ತಾನ ಕ್ರಿಕೆಟಿಗರಿಗೆ ಭಾರತ ನೆಚ್ಚಿನ ತಾಣ. ಇದರ ಜೊತೆಗೆ ಭಾರತದ ತಿನಿಸುಗಳು ಕೂಡ ಅಷ್ಟೇ ಇಷ್ಟ. ಬಹುತೇಕ ಅಫ್ಘಾನ್ ಕ್ರಿಕೆಟಿಗರಿಗೆ ಹೈದರಬಾದ್ ಬಿರಿಯಾನಿ ಇಷ್ಟ. ಅಫ್ಘಾನ್ ಕ್ರಿಕೆಟಿಗರ ಇಷ್ಟದ ತಿನಿಸುಗಳ ವಿವರ ಇಲ್ಲಿದೆ.

Afghanistan players open up on their favourite food
  • Facebook
  • Twitter
  • Whatsapp

ಬೆಂಗಳೂರು(ಜೂ.16): ಟೆಸ್ಟ್ ಕ್ರಿಕೆಟಿಗೆ ಪಾದಾರ್ಪಣೆ ಮಾಡೋ ಮೂಲಕ ಅಫ್ಘಾನಿಸ್ತಾನ ಕ್ರಿಕೆಟ್ ತಂಡ ಇತಿಹಾಸ ರಚಿಸಿದೆ. ಅಫ್ಘಾನ್ ಕ್ರಿಕೆಟ್ ಬೆಳವಣಿಗೆಯಲ್ಲಿ ಭಾರತದ ಪಾತ್ರ ಪ್ರಮುಖವಾಗಿದೆ. ಅತ್ತ ಅಫ್ಘಾನ್ ಕ್ರಿಕೆಟಿಗರಿಗೂ ಭಾರತ ಅಂದ್ರೆ ಅಷ್ಟೇ ಪ್ರೀತಿ. ಅದರಲ್ಲೂ ಹೈದರಾಬಾದ್ ಬಿರಿಯಾನಿ ಅಂದರೆ ತುಂಬಾ ಇಷ್ಟ.

ಅಫ್ಘಾನಿಸ್ತಾನ ಹಿರಿಯ ಕ್ರಿಕೆಟಿಗ ಮೊಹಮ್ಮದ್ ನಬಿಗೆ ಹೈದರಾಬಾದ್ ಬಿರಿಯಾನಿ ತುಂಬಾ ಇಷ್ಟ. ಆದರೆ ಈ ಬಾರಿ ರಂಜಾನ್ ಉಪವಾಸದ ಕಾರಣ ಹೈದರಾಬಾದ್ ಬಿರಿಯಾನಿ ತಿನ್ನಲು ಸಾಧ್ಯವಾಗಿಲ್ಲ ಎಂದು ಮೊಹಮ್ಮದ್ ನಬಿ  ಇಎಸ್‌ಪಿಎನ್ ಕ್ರಿಕ್‌ಇನ್ಫೋಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಅಫ್ಘಾನ್ ತಂಡದ ಯುವ ಕ್ರಿಕೆಟಿಗ ಜಹೀರ್ ಖಾನ್‌ಗೆ ಭಾರತದಲ್ಲಿ ಸಿಗೋ ಚಿಕನ್ ಬಿರಿಯಾನಿ ಫೇವರಿಟ್. ಭಾರತದ ತಿನಿಸುಗಳನ್ನ ಇಷ್ಟಪಡೋ ಮೊಹಮ್ಮದ್ ಶೆಹಝಾದ್‌ಗೆ ಅಫ್ಘಾನಿಸ್ತಾನ್ ಪುಲಾವ್ ಇಷ್ಟದ ತಿನಿಸು ಎಂದಿದ್ದಾರೆ.
 

Follow Us:
Download App:
  • android
  • ios