ಅಡಿಲೇಡ್[ಡಿ.09]: ಟೀಂ ಇಂಡಿಯಾ ನೀಡಿದ್ದ ಕಠಿಣ ಸವಾಲು ಬೆನ್ನತ್ತಿರುವ ಆಸ್ಟ್ರೆಲಿಯಾ ತಂಡಕ್ಕೆ ಮೊದಲ ಆಘಾತ ಎದುರಾಗಿದ್ದು, ಆ್ಯರೋನ್ ಫಿಂಚ್ 11 ರನ್ ಬಾರಿಸಿ ಅಶ್ವಿನ್’ಗೆ ವಿಕೆಟ್ ಒಪ್ಪಿಸಿದ್ದಾರೆ.

ಅಡಿಲೇಡ್’ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್’ನಲ್ಲಿ ಟೀಂ ಇಂಡಿಯಾ 323 ರನ್’ಗಳ ಕಠಿಣ ಗುರಿ ನೀಡಿದೆ. ಸವಾಲಿನ ಗುರಿ ಬೆನ್ನತ್ತಿರುವ ಆಸಿಸ್ ಎಚ್ಚರಿಕೆಯ ಆಟಕ್ಕೆ ಮುಂದಾಯಿತು. ಮೊದಲ ವಿಕೆಟ್’ಗೆ ಮಾರ್ಕಸ್ ಹ್ಯಾರಿಸ್-ಆ್ಯರೋನ್ ಫಿಂಚ್ ಜೋಡಿ 12 ಓವರ್’ಗಳಲ್ಲಿ 28 ರನ್’ಗಳ ಜತೆಯಾಟವಾಡುವ ಮೂಲಕ ಉತ್ತಮ ಆರಂಭದ ಮುನ್ಸೂಚನೆ ನೀಡಿದರು. ಆದರೆ 12ನೇ ಓವರ್’ನ ಕೊನೆಯ ಎಸೆತದಲ್ಲಿ ಅಶ್ವಿನ್ ಬೌಲಿಂಗ್’ನಲ್ಲಿ ಫಿಂಚ್ ಪ್ಯಾಡ್’ಗೆ ಬಡಿದ ಚೆಂಡನ್ನು ಪಂತ್ ಕ್ಯಾಚ್ ಪಡೆದು ಔಟ್’ಗಾಗಿ ಮನವಿ ಸಲ್ಲಿಸಿದರು. ಒಂದು ವೇಳೆ ಫಿಂಚ್ ಡಿಆರ್’ಎಸ್ ಬಳಸಿದ್ದರೆ ಫಿಂಚ್ ನಾಟ್’ಔಟ್ ಆಗುತ್ತಿದ್ದರು.

ಈಗಾಗಲೇ ಫಿಚ್ ಸ್ಪಿನ್ನರ್’ಗಳಿಗೆ ಸಾಕಷ್ಟು ನೆರವು ನೀಡುತ್ತಿದ್ದು, ಅಶ್ವಿನ್ ಇಂದು ಮತ್ತಷ್ಟು ವಿಕೆಟ್ ಕಬಳಿಸುವ ಸಾಧ್ಯತೆಯಿದೆ. ನಾಲ್ಕನೇ ದಿನದಾಟದಲ್ಲಿ ಇನ್ನೂ 38 ಓವರ್’ಗಳು ಬಾಕಿಯಿದ್ದು, ಆಸಿಸ್ ಗೆಲ್ಲಲು 295 ರನ್’ಗಳ ಅವಶ್ಯಕತೆಯಿದೆ.

ಸಂಕ್ಷಿಪ್ತ ಸ್ಕೋರ್:

ಭಾರತ: 
250& 307
ಆಸ್ಟ್ರೇಲಿಯಾ: 
235 & 28/1*