Asianet Suvarna News Asianet Suvarna News

ಗಣೇಶ ಹಬ್ಬದಂದು ಅಭಿಮಾನಿಗಳಿಗೆ ಸಿಹಿ ಮತ್ತು ಕಹಿ ಸುದ್ದಿ ನೀಡಿದ ಎಬಿಡಿ: ಅಭಿಮಾನಿಗಳು ಫುಲ್ ಖುಷ್

ಈತ ವಿಶ್ವ ಕ್ರಿಕೆಟ್'​​​ನ ಲೆಜೆಂಡ್​​​. ವಿಶ್ವದ ಮೂಲೆ ಮೂಲೆಯಲ್ಲೂ ಈತನಿಗೆ ಅಭಿಮಾನಿಗಳಿದ್ದಾರೆ. ಆದರೆ ಒಂದು ವರ್ಷದ ಹಿಂದೆ ಟೆಸ್ಟ್​​​ ಕ್ರಿಕೆಟ್​'ಗೆ ಗುಡ್​​​ಬೈ ಹೇಳಿ ತನ್ನ ದೇಶ ಮತ್ತು ಅಭಿಮಾನಿಗಳಿಗೆ ಶಾಕ್​ ಕೊಟ್ಟಿದ್ರು. ಆದರೆ ಆತನ ಟೆಸ್ಟ್​​​​ ನಿವೃತ್ತಿ ಬಗ್ಗೆ ಆತನ ಅಭಿಮಾನಿಗಳು ಇನ್ನಿಲ್ಲದಂತೆ ಬೇಸರ ವ್ಯಕ್ತಪಡಿಸಿದ್ರು. ಈಗ ಅಭಿಮಾನಿಗಳ ಬೇಸರಕ್ಕೆ ಸ್ಪಂಧಿಸಿರುವ ಆತ ಟೆಸ್ಟ್​​​ ಕ್ರಿಕೆಟ್​​'ಗೆ ಮರಳಲು ನಿರ್ಧರಿಸಿದ್ದಾನೆ. ಅಷ್ಟೇ ಅಲ್ಲ ತನ್ನ ಅಭಿಮಾನಿಗಳಿಗೆ ಶಾಕಿಂಗ್​ ನ್ಯೂಸ್​​​ ಒಂದನ್ನ ನೀಡಿದ್ದಾರೆ.

ABD Gave Both Good And Bad News To His Fans

ಸೌತ್​ ಆಫ್ರಿಕಾದ ಸ್ಪೋಟಕ ಬ್ಯಾಟ್ಸ್​​​ಮನ್​ ಕ್ರೀಸ್​​'ಗೆ ಬಂದ್ರೆ ಎದುರಾಳಿ ತಂಡದ ಬೌಲರ್ಸ್​​​​ಗೆ ನಡುಕ ಶುರುವಾಗುತ್ತೆ. ಟೆಸ್ಟ್​​​ ಕ್ರಿಕೆಟ್​​​​ ಆಗಿರಲಿ ಸೀಮಿತ ಓವರ್​​ಗಳ ಫಾರ್ಮೆಟೇ ಆಗಿರಲಿ 360 ಡಿಗ್ರಿ ಬ್ಯಾಟ್​​ ಬೀಸೋ ಡಿವಿಲಿಯರ್ಸ್​ಗೆ ಏಕಾಂಗಿಯಾಗಿ ಪಂದ್ಯ ಗೆಲ್ಲಿಸಬಲ್ಲ ತಾಕತ್ತಿದೆ. ವಿಶ್ವದ ಮೂಲೆಮೂಲೆಗಳಲ್ಲೂ ಕ್ರಿಕೆಟ್ ಅಭಿಮಾನಿಗಳು ಈತನ ಬ್ಯಾಟಿಂಗ್ ವೈಭವವನ್ನ ನೋಡೋಕೆ ಹಾತೊರೆಯುತ್ತಾರೆ.

ಇಂತಹ ಮಹಾನ್ ಆಟಗಾರ ಕಳೆದ 20 ತಿಂಗಳ ಹಿಂದೆ ಟೆಸ್ಟ್​​​ ಕ್ರಿಕೆಟ್​​​​'ನಿಂದ ದೂರ ಉಳಿದುಬಿಟ್ಟಿದ್ರು. ಅಷ್ಟೇ ಅಲ್ಲ ಸೀಮಿತ ಓವರ್​​ಗಳ ಕ್ರಿಕೆಟ್​​ನಲ್ಲೂ ಹೆಚ್ಚು ಕಾಣಲೇ ಇಲ್ಲ. ಅವರ ಬೆನ್ನು ನೋವು ಅವರನ್ನ ಮೈದಾನಕ್ಕಿಳಿಯದಂತೆ ಮಾಡಿಬಿಟ್ಟಿತ್ತು. ಆದ್ರೆ ಒಂದುವರೆ ವರ್ಷಗಳ ಬಳಿಕ ಅಂದ್ರೆ ಗಣೇಶ ಹಬ್ಬವಾದ ನಿನ್ನೆ ಡಿವಿಲಿಯರ್ಸ್​​​​ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಈ ಮೂಲಕ ವಿಶ್ವವನ್ನೆ ಖುಷಿಯ ಅಲೆಯಲ್ಲಿ ತೇಲಿಸಿದ್ದಾರೆ.

20 ತಿಂಗಳ ನಂತರ ಟೆಸ್ಟ್​​ ಕ್ರಿಕೆಟ್​​ಗೆ ಮರಳಿದ ABD

ಎಬಿ ಡಿವಿಲಿಯರ್ಸ್​​​​ ತಮ್ಮ ಕೋಟ್ಯಾಂತರ ಅಭಿಮಾನಿಗಳಿಗೆ ಗಣೇಶ ಹಬ್ಬಕ್ಕೆ ಸಿಹಿಸುದ್ದಿ ನೀಡಿದ್ದಾರೆ. ಕಳೆದ 20 ತಿಂಗಳಿನಿಂದ ಅಂತಾರಾಷ್ಟ್ರೀಯ ಕ್ರಿಕೆಟ್​​​​ನಲ್ಲಿ ಹೆಚ್ಚು ಕಾಣಿಸಿಕೊಂಡಿರದಿದ್ದ ಎಬಿಡಿ ಅಕ್ಟೋಬರ್​​​ 1 ರಿಂದ  ಟೆಸ್ಟ್​​​, ಏಕದಿನ ಮತ್ತು ಟಿ20 ಮೂರೂ ಮಾದರಿಯ ಕ್ರಿಕೆಟ್​​'​ಗೂ ಲಭ್ಯರಿರುವುದಾಗಿ ನಿನ್ನೆ ಹೇಳಿಕೊಂಡಿದ್ದಾರೆ.

ಎಬಿಡಿಯ ಈ ನಿರ್ಧಾರದಿಂದ ತಮ್ಮ ಅಭಿಮಾನಿಗಳು ಎಷ್ಟು ಥ್ರಿಲ್​​ ಆಗಿದ್ದಾರೋ ಅದರ ಎರಡರಷ್ಟು ದಕ್ಷಿಣ ಆಫ್ರಿಕಾ ಕ್ರಿಕೆಟ್​​​ ಖುಷಿ ಪಟ್ಟಿದೆ. ತಮ್ಮ ಅದ್ಭುತ ಆಟಗಾರನಿಲ್ಲದೆ ಬ್ಯಾಕ್​ ಟು ಬ್ಯಾಕ್​ ಸೋಲುಗಳನ್ನ ಕಂಡಿದ್ದ ಸೌತ್​​ ಆಫ್ರಿಕಾ ಎಬಿಡಿಯ ಕಮ್​ಬ್ಯಾಕ್​​ ಸುದ್ದಿ ಯಿಂದ ನಿರಾಳವಾಗಿದೆ. ತಂಡದಲ್ಲಿ ಆಶಕಿರಣ ಮೂಡಿದೆ.

ಡಿವಿಲಿಯರ್ಸ್​​​ ಕಮ್​ಬ್ಯಾಕ್'​ಗೆ ಕ್ರಿಕೆಟ್​​​ ದಿಗ್ಗಜರೂ ಖುಷಿ

ಕೇವಲ ಕೋಟ್ಯಾಂತರ ಅಭಿಮಾನಿಗಳು ಮತ್ತು ಕ್ರಿಕೆಟ್​​​ ಸೌತ್​​ ಆಫ್ರಿಕಾ ಮಾತ್ರ ಡಿವಿಲಿಯರ್ಸ್​​​ರ ಈ ಸುದ್ದಿಯಿಂದ ಸಂಭ್ರಮಿಸುತ್ತಿಲ್ಲ. ಬದಲಿಗೆ ನಾನಾ ದೇಶದ ಕ್ರಿಕೆಟ್​​ ದಿಗ್ಗಜರೆಲ್ಲಾ ಖುಷಿಯನ್ನ ವ್ಯಕ್ತಪಡಿಸಿದ್ದಾರೆ. ಇದು ಎಬಿಡಿಯ ದಿಟ್ಟ ನಿರ್ಧಾರ ಎಂದು ಬಣ್ಣಿಸಿದ್ದಾರೆ.

 ‘ಎಬಿ ಡಿವಿಲಿಯರ್ಸ್​​​ ಕಮ್​ಬ್ಯಾಕ್ ಸುದ್ದಿ​ ನನಗೆ ಖುಷಿ ತಂದಿದೆ. ಕಳೆದ ತಿಂಗಳು ಇಂಗ್ಲೆಂಡ್​​​ ವಿರುದ್ಧದ ಸರಣಿಯಲ್ಲೇ  ಎಬಿ ತಂಡಕ್ಕೆ ವಾಪಸ್ಸಾಗಬೇಕಿತ್ತು. ಅವರಿಲ್ಲದೆ ಸೌತ್​ ಆಫ್ರಿಕಾ ನಲುಗಿ ಹೋಗಿತ್ತು. ಈಗ ಅವರ ಈ ಸುದ್ದಿ ತಂಡಕ್ಕೆ ಆನೆ ಬಲ ಬಂತಾಗಿದೆ. ವೆಲ್​ಕಮ್​​ ಬ್ಯಾಕ್​​ ABD. ಎಂದು ಇಂಗ್ಲೆಂಡ್​​​ ಮಾಜಿ ಬೌಲರ್​​ ಗ್ರೇಮ್​ ಸ್ವಾನ್​​ ಹೇಳಿಕೊಂಡಿದ್ದಾರೆ.

ಸಿಹಿಯ ಜೊತೆಗೆ ಕಹಿ ಸುದ್ದಿ..!: ನಾಯಕತ್ವಕ್ಕೆ ಡಿವಿಲಿಯರ್ಸ್​​​​ ಗುಡ್​​ ಬೈ

ಅಂತರಾಷ್ಟ್ರೀಯ ಕ್ರಿಕೆಟ್'​ಗೆ ಮರಳುವುದಾಗಿ ತಿಳಿಸಿ ತನ್ನ ಅಭಿಮಾನಿಗಳನ್ನ ಖುಷಿಪಡಿಸಿದ್ದ ಎಬಿ ಮತ್ತೊಂದು ಸುದ್ದಿಯೊಂದಿಗೆ ತನ್ನ ಅಭಿಮಾನಿಗಳನ್ನ ಬೇಸರ ಪಡಿಸಿದ್ದಾರೆ. ಏಕದಿನ ಮತ್ತು ಟಿ20 ನಾಯಕತ್ವದ ಜವಬ್ದಾರಿಯನ್ನ ಡಿವಿಲಿಯರ್ಸ್​ ತೊರೆದಿದ್ದಾರೆ. ಧೀರ್ಘ ಕಾಲ ಕ್ರಿಕೆಟ್​​ ಆಡಬೇಕು ಎಂಬ ಉದ್ದೇಶದಿಂದ ಎಬಿ ಈ ನಿರ್ಧಾರ ಕೈಗೊಂಡಿದ್ದಾರೆ. ನಾಯಕತ್ವದ ಜವಬ್ಆರಿ ಹೊತ್ತರೆ ಮತ್ತೆ ಎಲ್ಲಿ ಮತ್ತೆ ಕ್ರಿಕೆಟ್​​ ನಿಂದ ದೂರ ಸರಿಯಬೇಕಾಗುತ್ತೋ ಅನ್ನೋ ಉದ್ದೇಶದಿಂದ ಡಿವಿಲಿಯರ್ಸ್​​ ಈ ನಿರ್ಧಾರ ಕೈಗೊಂಡಿದ್ದಾರೆ.

ಎಬಿಡಿ ಸದಾ ನಮ್ಮನ್ನ ರಂಜಿಸುತ್ತಿರಬೇಕಷ್ಟೆ, ಅದಕ್ಕಾಗಿ ಅವರು ನಾಯಕತ್ವ ತೊರೆದ್ರೂ ಪರವಾಗಿಲ್ಲ. ಅವರ ಆಟವನ್ನ ನಾವು ಮುಂದೆದೂ ಮಿಸ್​​ ಮಾಡಿಕೊಳ್ಳದೇ ಹೋದ್ರೆ ಅಷ್ಟೇ ಸಾಕು ಅಂತಿದ್ದಾರೆ ಎಬಿ ಡಿವಿಲಿಯರ್ಸ್​​​ರ ಕೋಟ್ಯಾಂತರ ಅಭಿಮಾನಿಗಳು.

Follow Us:
Download App:
  • android
  • ios