ದಕ್ಷಿಣ ಆಫ್ರಿಕಾ, ಆರ್'ಸಿಬಿಯ ಸ್ಫೋಟಕ ಬ್ಯಾಟ್ಸ್'ಮೆನ್ ಕೊಹ್ಲಿಯ ಆಪ್ತ ಸ್ನೇಹಿತರು ಆದ ಎಬಿಡಿ ವಿಲಿಯರ್ಸ್ ವಿಭಿನ್ನ ಶೈಲಿಯಲ್ಲಿ ಶುಭಾಶಯ ಕೋರಿ ಸ್ನೇಹಿತನಿಗೆ ನಗೆಯ ಹೊನಲು ತರಿಸಿದ್ದಾರೆ.

ಬೆಂಗಳೂರು(ಡಿ.15): ಅನೀರಿಕ್ಷಿತವಾಗಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ವಿವಾಹವಾಗಿ ಕೊಟ್ಯಂತರ ಅಭಿಮಾನಿಗಳಿಗೆ ಅಚ್ಚರಿ ನೀಡಿದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ'ಗೆ ಶುಭಾಶಯಗಳ ಸಾಮಾಜಿಕ ಮಾಧ್ಯಮಗಳಲ್ಲಿ ಶುಭಾಶಯಗಳ ಸುರಿಮಳೆಯೆ ಹರಿದುಬಂದಿದೆ.

ನೂರಾರು ಹಿರಿ,ಕಿರಿ ಗೆಳೆಯರು ಸಹೋದ್ಯೋಗಿಗಳು ಕೂಡ ತಮ್ಮದೆ ಶೈಲಿಯಲ್ಲಿ ವಿಶ್ ಮಾಡಿದರು. ದಕ್ಷಿಣ ಆಫ್ರಿಕಾ, ಆರ್'ಸಿಬಿಯ ಸ್ಫೋಟಕ ಬ್ಯಾಟ್ಸ್'ಮೆನ್ ಕೊಹ್ಲಿಯ ಆಪ್ತ ಸ್ನೇಹಿತರು ಆದ ಎಬಿಡಿ ವಿಲಿಯರ್ಸ್ ವಿಭಿನ್ನ ಶೈಲಿಯಲ್ಲಿ ಶುಭಾಶಯ ಕೋರಿ ಸ್ನೇಹಿತನಿಗೆ ನಗೆಯ ಹೊನಲು ತರಿಸಿದ್ದಾರೆ.

ಎಬಿಡಿ ಶುಭಾಶಯ ಕೋರಿದ ಮಾತುಗಳಿವು

'ಗೃಹಸ್ಥ ಜೀವನಕ್ಕೆ ಕಾಲಿಟ್ಟ ವಿರಾಟ್ ಹಾಗೂ ಅನುಷ್ಕ ಅವರಿಗೆ ಶುಭಾಶಯಗಳು. ಈ ವಿಷಯ ನನಗೆ ನಿಜಕ್ಕೂ ಅಶ್ಚರ್ಯ ತಂದಿದೆ.ಆದರೆ ನನಗೆ ಯಾವಾಗಲು ತಿಳಿದಿತ್ತು ಅವರು ತಮ್ಮ ತೋಳುಗಳಲ್ಲಿ ಬಂಧಿಯಾಗಿ ಅಚ್ಚರಿ ಮೂಡಿಸಿದ್ದಾರೆ. ನನ್ನ ಒಳ್ಳೆಯ ಸ್ನೇಹಿತರಾದ ವಿರಾಟ್ ಹಾಗೂ ಅನುಷ್ಕಾ ಅವರಿಗೆ ಧನ್ಯವಾದಗಳು. ನೀವಿಬ್ಬರು ನಿಮ್ಮ ಜೀವನದಲ್ಲಿ ಒಟ್ಟಿಗೆ ಸದಾ ಖುಷಿಯಾಗಿ, ಸಂತಸದಿಂದ ಇರುವಿರೆಂದು ನನಗೆ ತಿಳಿದಿದೆ. ವಿವಾಹದ ಅಚ್ಚರಿಯ ರೀತಿಯಲ್ಲೇ ಹೆಚ್ಚು ಮಕ್ಕಳಿಗೆ ಜನ್ಮಧಾತರಾಗಿ' ಎಂದು ಶುಭ ಹಾರೈಸಿದ್ದಾರೆ.

ಕೊಹ್ಲಿ ಹಾಗೂ ಎಬಿಡಿ ಶೀಘ್ರದಲ್ಲಿಯೇ ಎದುರಾಳಿಗಳಾಗಿ ಕಣಕ್ಕಿಳಿಯಲಿದ್ದಾರೆ.ಭಾರತ ತಂಡ ಜನವರಿಯಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡು 3 ಟೆಸ್ಟ್ ಸರಣಿಯನ್ನು ಆಡಲಿದೆ. ಪ್ರಬಲ ತಂಡವಾಗಿರುವ ದಕ್ಷಿಣ ಆಫ್ರಿಕಾ ಕೊಹ್ಲಿ ತಂಡಕ್ಕೆ ಕಠಿಣ ಸವಾಲು ಒಡ್ಡಲಿದೆ.