ಈ ಹಿಂದೆ, ಭಾರತದ ಖ್ಯಾತ ಕ್ರಿಕೆಟ್ ತಾರೆಗಳಾದ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ವೆಸ್ಟ್ ಇಂಡೀಸ್‌ನ ಬ್ರಯಾನ್ ಲಾರಾ, ಸ್ಟೀವ್ ವಾ ಅವರಿಗೂ ಎಂಆರ್‌ಎಫ್ ಪ್ರಾಯೋಜಕತ್ವ ನೀಡಿತ್ತು.

ಕೇಪ್‌ಟೌನ್(ಡಿ.07): ಮೊಣಕೈ ಶಸ್ತ್ರಚಿಕಿತ್ಸೆಯಿಂದಾಗಿ ಕಳೆದಾರು ತಿಂಗಳುಗಳ ಕಾಲ ಕ್ರಿಕೆಟ್‌'ನಿಂದ ದೂರವುಳಿದಿದ್ದ ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್, ಇದೀಗ ತಾವು ಭಾರತದ ಖ್ಯಾತ ಟೈರ್ ತಯಾರಿಕಾ ಸಂಸ್ಥೆಯಾದ ಎಂಆರ್‌ಎಫ್ ಜತೆಗೆ ಪ್ರಾಯೋಜಕತ್ವಕ್ಕೆ ಸಹಿ ಹಾಕಿರುವುದಾಗಿ ಘೋಷಿಸಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘‘ಎಂಆರ್‌ಎಫ್ ಲಾಂಛನವುಳ್ಳ ಬ್ಯಾಟ್ ಇದೀಗ ನನ್ನ ಕೈ ಸೇರಿರುವುದು ಖುಷಿಯ ವಿಚಾರ’’ ಎಂದಿದ್ದಾರೆ.

ಈ ಹಿಂದೆ, ಭಾರತದ ಖ್ಯಾತ ಕ್ರಿಕೆಟ್ ತಾರೆಗಳಾದ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ವೆಸ್ಟ್ ಇಂಡೀಸ್‌ನ ಬ್ರಯಾನ್ ಲಾರಾ, ಸ್ಟೀವ್ ವಾ ಅವರಿಗೂ ಎಂಆರ್‌ಎಫ್ ಪ್ರಾಯೋಜಕತ್ವ ನೀಡಿತ್ತು.

Scroll to load tweet…