13 ವರ್ಷಗಳ ಹಿಂದೆ ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ 228 ಇನಿಂಗ್ಸ್'ನಲ್ಲಿ ಒಂಬತ್ತು ಸಾವಿರ ರನ್ ಪೂರೈಸಿದ್ದದಾಖಲೆ ಮಾಡಿದ್ದರು. ಆದರೆ ಆ ದಾಖಲೆಯೀಗ ಎಬಿಡಿ ಪಾಲಾಗಿದೆ.

ಬೆಂಗಳೂರು(ಫೆ.25): ಗಾಯದ ಸಮಸ್ಯೆಯಿಂದ ಕೆಲಕಾಲ ತಂಡದಿಂದ ದೂರಉಳಿದಿದ್ದ ದಕ್ಷಿಣ ಆಫ್ರಿಕಾ ನಾಯಕ ಎಬಿ ಡಿವಿಲಿಯರ್ಸ್ ಭರ್ಜರಿಯಾಗಿ ತಂಡಕ್ಕೆ ಕಮ್'ಬ್ಯಾಕ್ ಮಾಡಿದ್ದಾರೆ.

ನ್ಯೂಜಿಲ್ಯಾಂಡ್ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ಅತಿವೇಗವಾಗಿ 9 ಸಾವಿರ ರನ್ ಆಟಗಾರ ಎನ್ನುವ ಹಿರಿಮೆಗೆ ಎಬಿ ಡಿವಿಲಿಯರ್ಸ್ ಭಾಜನರಾಗಿದ್ದಾರೆ. 360 ಡಿಗ್ರಿ ಖ್ಯಾತಿಯ ಎಬಿಡಿ ಕೇವಲ 205 ಇನಿಂಗ್ಸ್'ನಲ್ಲಿ 9 ಸಾವಿರ ರನ್ ಪೂರೈಸಿದ್ದಾರೆ. 13 ವರ್ಷಗಳ ಹಿಂದೆ ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ 228 ಇನಿಂಗ್ಸ್'ನಲ್ಲಿ ಒಂಬತ್ತು ಸಾವಿರ ರನ್ ಪೂರೈಸಿದ್ದದಾಖಲೆ ಮಾಡಿದ್ದರು. ಆದರೆ ಆ ದಾಖಲೆಯೀಗ ಎಬಿಡಿ ಪಾಲಾಗಿದೆ.

ಎಬಿಡಿ ಏಕದಿನ ಕ್ರಿಕೆಟ್'ನಲ್ಲಿ 100ರ ಸರಾಸರಿ ಸ್ಟ್ರೈಕ್'ರೇಟ್'ನೊಂದಿಗೆ ಕೇವಲ 9005 ಎಸೆತಗಳಲ್ಲಿ ಒಂಬತ್ತು ಸಾವಿರರನ್ನು ಪೂರೈಸುವ ಮೂಲಕ ಅತೀ ಕಡಿಮೆ ಎಸೆತದಲ್ಲಿ ಈ ಸಾಧನೆ ಮಾಡಿದ ದಾಖಲೆ ಕೂಡ ದಕ್ಷಿಣ ಆಫ್ರಿಕಾ ನಾಯಕನ ಹೆಸರಿಗೆ ಬರೆಯಲ್ಪಟ್ಟಿತು. ಈ ಮೊದಲ 9 ಸಾವಿರ ರನ್ ಪೂರೈಸಲು ಆ್ಯಡಂ ಗಿಲ್'ಕ್ರಿಸ್ಟ್ 9328 ಬಾಲ್ ಎದುರಿಸಿದ್ದರು.

9 ಸಾವಿರ ಗಡಿ ದಾಟಲು ಪ್ರಮುಖ ಬ್ಯಾಟ್ಸ್'ಮನ್ ತೆಗೆದುಕೊಂಡ ಪಂದ್ಯಗಳು:

ಆಟಗಾರ ಪಂದ್ಯ ಇನಿಂಗ್ಸ್

ಎಬಿ ಡಿವಿಲಿಯರ್ಸ್ 214 205

ಸೌರವ್ ಗಂಗೂಲಿ 236 228

ಸಚಿನ್ ತೆಂಡೂಲ್ಕರ್ 242 235

ಬ್ರಿಯಾನ್ ಲಾರ 246 239

ರಿಕಿ ಪಾಂಟಿಂಗ್ 248 242

ಜಾಕ್ ಕಾಲೀಸ್ 256 242