Asianet Suvarna News Asianet Suvarna News

ಪಿಂಚ್ ಆರ್ಭಟ, ಬ್ಯಾಟಿಂಗ್ ವೈಫಲ್ಯಕ್ಕೆ ಮಂಕಾದ ಆರ್'ಸಿಬಿ: ಪವಾಡ ನಡೆದರಷ್ಟೆ ಪ್ಲೇಆಫ್

ನಿರ್ಣಾಯಕ ಪಂದ್ಯದಲ್ಲಿ ಕೇವಲ 134 ರನ್‌ಗಳಿಗೆ ಆರ್‌ಸಿಬಿಯನ್ನು ಕಟ್ಟಿಹಾಕಿದ ಗುಜರಾತ್, ಇನ್ನೂ 6.1 ಎಸೆತ ಬಾಕಿ ಇರುವಂತೆಯೇ ಗೆಲುವಿನ ಗುರಿ ತಲುಪಿತು. ನಾಯಕ ಸುರೇಶ್ ರೈನಾ (34: 30 ಎಸೆತ, 4 ಬೌಂಡರಿ, 1 ಸಿಕ್ಸರ್) ಅಜೇಯರಾಗಿ ಉಳಿದು, ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

Aaron Finch destroys Bangalore bowlers

ಬೆಂಗಳೂರು(ಏ.27): ಆ್ಯಂಡ್ರೂ ಟೈ(3-12) ಮಾರಕ ದಾಳಿ ಹಾಗೂ ಆರೋನ್ ಫಿಂಚ್ (72: 34 ಎಸೆತ, 5 ಬೌಂಡರಿ, 6 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಗುಜರಾತ್ ಲಯನ್ಸ್ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.

ನಿರ್ಣಾಯಕ ಪಂದ್ಯದಲ್ಲಿ ಕೇವಲ 134 ರನ್‌ಗಳಿಗೆ ಆರ್‌ಸಿಬಿಯನ್ನು ಕಟ್ಟಿಹಾಕಿದ ಗುಜರಾತ್, ಇನ್ನೂ 6.1 ಎಸೆತ ಬಾಕಿ ಇರುವಂತೆಯೇ ಗೆಲುವಿನ ಗುರಿ ತಲುಪಿತು. ನಾಯಕ ಸುರೇಶ್ ರೈನಾ (34: 30 ಎಸೆತ, 4 ಬೌಂಡರಿ, 1 ಸಿಕ್ಸರ್) ಅಜೇಯರಾಗಿ ಉಳಿದು, ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಕನಿಷ್ಠ ಮೊತ್ತ ರಕ್ಷಿಸಿಕೊಳ್ಳುವ ಹೋರಾಟದಲ್ಲಿದ್ದ ಆರ್‌ಸಿಬಿಗೆ ಸ್ಯಾಮುಯಲ್ ಬದ್ರಿ 2 ವಿಕೆಟ್ ಕಬಳಿಸಿ ಅವಕಾಶ ಕಲ್ಪಿಸಿದರಾದರೂ ಉಳಿದ ಬೌಲರ್‌ಗಳು ದುಬಾರಿಯಾದ ಕಾರಣ, ಪಂದ್ಯವನ್ನು ಕೈಚೆಲ್ಲಬೇಕಾಯಿತು. ಸದ್ಯ ಆಡಿರುವ 9 ಪಂದ್ಯಗಳಲ್ಲಿ 6ರಲ್ಲಿ ಸೋಲು ಕಂಡಿರುವ ಆರ್‌ಸಿಬಿ ಪ್ಲೇ-ಆಫ್ ಕೋಲ್ಕತಾ ನೈಟ್‌ರೈಡರ್ಸ್‌ ವಿರುದ್ಧ 49 ರನ್‌ಗೆ ಸರ್ವಪತನಗೊಂಡು ಮುಖಭಂಗಕ್ಕೊಳಗಾಗಿದ್ದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ, ಆ ಆಘಾತದಿಂದ ಹೊರಬಂದಂತೆ ಕಾಣುತ್ತಿಲ್ಲ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ಗುಜರಾತ್ ಲಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ತಂಡ ಮತ್ತೊಮ್ಮೆ ಬ್ಯಾಟಿಂಗ್ ವೈಲ್ಯ ಅನುಭವಿಸಿತು.

ಐಪಿಎಲ್‌ನಲ್ಲಿ ಇದೇ ಮೊದಲ ಬಾರಿಗೆ ಬೆಂಗಳೂರು ತಂಡ ಸತತ 2 ಪಂದ್ಯಗಳಲ್ಲಿ ಎಲ್ಲಾ 10 ವಿಕೆಟ್ ಕಳೆದುಕೊಂಡ ಅಪಖ್ಯಾತಿಗೆ ಗುರಿಯಾಯಿತು. ಟಾಸ್ ಗೆದ್ದ ಸುರೇಶ್ ರೈನಾ ಮೊದಲು ಆತಿಥೇಯ ತಂಡವನ್ನು ಬ್ಯಾಟಿಂಗ್ ಮಾಡುವಂತೆ ಆಹ್ವಾನಿಸಿದರು. ಕ್ರಿಸ್ ಗೇಲ್ ಜತೆ ಇನ್ನಿಂಗ್ಸ್ ಆರಂಭಿಸಲು ಇಳಿದ ನಾಯಕ ವಿರಾಟ್ ಕೊಹ್ಲಿ ಕೇವಲ 10 ರನ್‌ಗಳಿಸಿ ಮೊದಲಿಗರಾಗಿ ನಿರ್ಗಮಿಸಿದರು. 5ನೇ ಓವರ್‌ನಲ್ಲಿ ದಾಳಿಗಿಳಿದ ಆ್ಯಂಡ್ರ್ಯೂ ಟೈ ಸತತ ಎಸೆತಗಳಲ್ಲಿ ಕ್ರಿಸ್ ಗೇಲ್ ಹಾಗೂ ಟ್ರ್ಯಾವಿಸ್ ಹೆಡ್ ಅವರನ್ನ ಪೆವಿಲಿಯನ್‌ಗಟ್ಟಿ ಆರ್‌ಸಿಬಿಗೆ ಭಾರೀ ಪೆಟ್ಟು ನೀಡಿದರು. ಕೇದಾರ್ ಜಾಧವ್(31) ಆದ ಅನಾಹುತವನ್ನು ಸರಿಪಡಿಸುವ ಕಾರ್ಯಕ್ಕೆ ಮುಂದಾದರಾದರೂ ನಿರ್ಣಾಹಕ ಹಂತದಲ್ಲಿ ಜಡೇಜಾಗೆ ವಿಕೆಟ್ ನೀಡಿದ್ದು ಹಿನ್ನಡೆಗೆ ಕಾರಣವಾಯಿತು. 11 ಎಸೆತಗಳನ್ನು ಎದುರಿಸಿ ಕೇವಲ 5 ರನ್ ಗಳಿಸಿ ಎಬಿ ಡಿವಿಲಿಯರ್ಸ್‌ ರನೌಟ್ ಬಲೆಗೆ ಬೀಳುತ್ತಿದ್ದಂತೆ ತವರು ತಂಡಕ್ಕೆ ಗಾಯದ ಮೇಲೆ ಬರೆ ಎಳೆದಂತಾಯಿತು. ಪವನ್ ನೇಗಿ (32: 19 ಎಸೆತ, 3 ಬೌಂಡರಿ, 2 ಸಿಕ್ಸರ್) ತುಸು ಹೋರಾಟ ಪ್ರದರ್ಶಿಸಿ ತಂಡ 100 ರನ್ ಗಡಿ ದಾಟುವಂತೆ ನೋಡಿಕೊಂಡರು. ಆರ್‌ಸಿಬಿ ಅಂತಿಮವಾಗಿ 20 ಓವರ್‌ಗಳಲ್ಲಿ 134 ರನ್‌ಗಳಿಗೆ ಸರ್ವಪತನಗೊಂಡಿತು. ಟೈ 3, ಜಡೇಜಾ 2 ವಿಕೆಟ್ ಕಬಳಿಸಿದರು.

 

ಸ್ಕೋರ್ ಕಾರ್ಡ್

ರಾಯಲ್ ಚಾಲೆಂಜರ್ಸ್‌ ಬೆಂಗಳೂರು 20 ಓವರ್‌ಗಳಲ್ಲಿ 134/10

ಗುಜರಾತ್ ಲಯನ್ಸ್ 135/3 (13.5)

ಪಂದ್ಯ ಶ್ರೇಷ್ಠ: ಆ್ಯಂಡ್ರ್ಯೂ ಟೈ

Follow Us:
Download App:
  • android
  • ios