ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಶ್ರೀಲಂಕಾ ತಂಡವು ಧರ್ಮಶಾಲಾದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತವನ್ನು 7 ವಿಕೆಟ್'ಗಳ ಅಂತರದಲ್ಲಿ ಸೋಲಿಸಿ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ.

ಮೊಹಾಲಿ(ಡಿ.12): ಮೊದಲ ಏಕದಿನ ಪಂದ್ಯದಲ್ಲಿ ತೋರಿದ ಪ್ರದರ್ಶನವನ್ನೇ ಮತ್ತೊಮ್ಮೆ ಮೊಹಾಲಿಯಲ್ಲೂ ಪ್ರದರ್ಶಿಸಿದರೆ ಟೀಂ ಇಂಡಿಯಾವನ್ನು ಮಣಿಸಿ ಸರಣಿ ಕೈವಶ ಮಾಡಿಕೊಳ್ಳಬಹುದು ಎಂದು ಶ್ರೀಲಂಕಾ ತಂಡದ ನಾಯಕ ತಿಸಾರ ಪೆರೇರಾ ಹೇಳಿದ್ದಾರೆ.

"ಭಾರತದಲ್ಲಿ ಚೊಚ್ಚಲ ಏಕದಿನ ಸರಣಿ ಗೆಲ್ಲಲು ಸುವರ್ಣಾವಕಾಶ ಒದಗಿ ಬಂದಿದೆ. ಭಾರತದಲ್ಲಿ ಹೆಚ್ಚಿನ ತಂಡಗಳು ಸರಣಿ ಗೆದ್ದಿಲ್ಲ. ಹಾಗಾಗಿ ನಾವು ಧರ್ಮಶಾಲಾದಲ್ಲಿ ಆಡಿದ ರೀತಿಯಲ್ಲಿಯೇ ಪ್ರದರ್ಶನ ತೋರಿದರೆ ಸರಣಿಯನ್ನು ಗೆಲ್ಲಬಹುದು" ಎಂದು ಸಹ ಆಟಗಾರರನ್ನು ಹುರಿದುಂಬಿಸಿದ್ದಾರೆ.

12 ಏಕದಿನ ಸೋಲಿನ ಬಳಿಕ ಬಲಿಷ್ಠ ಟೀಂ ಇಂಡಿಯಾವನ್ನು ಮಣಿಸಿ ಆತ್ಮವಿಶ್ವಾಸದಲ್ಲಿರುವ ಶ್ರೀಲಂಕಾ ತಂಡವು 13ರಂದು ಮೊಹಾಲಿಯಲ್ಲಿ ನಡೆಯಲಿರುವ ಎರಡನೇ ಪಂದ್ಯವನ್ನು ಗೆದ್ದು ಸರಣಿ ಕೈವಶ ಮಾಡಿಕೊಳ್ಳುವ ಇರಾದೆಯಲ್ಲಿದೆ. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಶ್ರೀಲಂಕಾ ತಂಡವು ಧರ್ಮಶಾಲಾದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತವನ್ನು 7 ವಿಕೆಟ್'ಗಳ ಅಂತರದಲ್ಲಿ ಸೋಲಿಸಿ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ.