ಪಾಕಿಸ್ತಾನದ ಅಬೊಟೊಬಾದ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯದಲ್ಲಿ ನಡೆದ ಜಗಳ 7 ಮಂದಿ ಸಾವಿಗೆ ಕಾರಣವಾಗಿದೆ. ಅಷ್ಟಕ್ಕೂ ಈ ಜಗಳ ನಡೆದಿದ್ದು ಹೇಗೆ? 7 ಮಂದಿ ಸಾವನ್ನಪ್ಪಿದ್ದು ಹೇಗೆ? ಇಲ್ಲಿದೆ ವಿವರ. 

ಪೇಶಾವರ(ನ.25): ಕ್ರಿಕೆಟ್ ಪಂದ್ಯದ ನಡುವೆ ನಡೆದ ಮಾತಿನ ಚಕಮಕಿ ಗಂಭೀರ ಸ್ವರೂಪ ಪಡೆದು ಶೂಟೌಟ್ ನಡೆದಿದೆ. ಇದರಿಂದ 7 ಮಂದಿ ಸಾವನ್ನಪ್ಪಿದು, ಒರ್ವ ಗಂಭೀರ ಗಾಯಗೊಂಡಿರುವ ಘಟನೆ ಪಾಕಿಸ್ತಾನದ ಅಬೊಟೋಬಾದ್‌ನಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಕ್ಕಳ ಕ್ರಿಕೆಟ್ ಪಂದ್ಯದ ವೇಳೆ ಎರಡು ಗುಂಪುಗಳ ನಡುವೆ ಜಗಳ ಆರಂಭವಾಗಿದೆ. ಇದು ತಾರಕಕ್ಕೇರಿದೆ. ಇದೇ ವೇಳೆ ಆಯಾ ಗುಂಪುಗಳಿಗೆ ಸಂಗಡಿಗರು ಸೇರಿಕೊಂಡು ಗುಂಡಿನ ದಾಳಿ ನಡೆಸಿದ್ದಾರೆ. ಒಂದು ಗುಂಪಿನ ನಾಲ್ವರು ಹಾಗೂ ಮತ್ತೊಂದು ಗುಂಪಿನ ಮೂವರು ಸಾಪನ್ನಪ್ಪಿದ್ದಾರೆ. 

ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿದೆ. ಈ ಕುರಿತು ಅಬೊಟೋಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಕ್ರಿಕೆಟ್ ನಡೆಯಬೇಕಿದ್ದ ಮೈದಾನದಲ್ಲಿ ಶೂಟೌಟ್ ನಡೆದಿದ್ದು ದುರಂತ.